ದ್ವಿಭಾಷಾ ಶಿಕ್ಷಣದಿಂದ ಮಕ್ಕಳ ಭವಿಷ್ಯ ಉಜ್ವಲ

ಯಲಬುರ್ಗಾ ತಾಲೂಕಿನ ಗೆದಿಗೇರಿ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದ್ವಿಭಾಷಾ (ಕನ್ನಡ-ಇಂಗ್ಲಿಷ್) ಬೋಧನೆ ಪ್ರಾರಂಭಿಸುವ ಅಭಿಯಾನ ಅಂಗವಾಗಿ ಶಾಲಾ ಆವರಣದಲ್ಲಿ ಮಾಹಿತಿ ಬ್ಯಾನರ್ ಅಳವಡಿಸಲಾಯಿತು. ಶಿಕ್ಷಕರಾದ ಸಂಗಪ್ಪ ವಕ್ಕಳದ, ರಾಜೇಸಾಬ ಮುಧೋಳ, ದಾವಲಸಾಬ ಮದರಿ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ರಾಮಣ್ಣ ಸಾಲಭಾವಿ ಅಭಿಮತ
ಯಲಬುರ್ಗಾ: ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ದ್ವಿಭಾಷಾ ಮಾಧ್ಯಮ ಬೋಧನೆ ಅತ್ಯಂತ ಮಹತ್ವದ್ದಾಗಿದೆ ಎಂದು ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ ರಾಮಣ್ಣ ಸಾಲಭಾವಿ ಹೇಳಿದರು.
ತಾಲೂಕಿನ ಗೆದಿಗೇರಿ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ 2026-27ನೇ ಶೈಕ್ಷಣಿಕ ವರ್ಷದಿಂದ 1 ರಿಂದ 5ನೇ ತರಗತಿವರೆಗೆ ದ್ವಿಭಾಷಾ (ಕನ್ನಡ-ಇಂಗ್ಲಿಷ್) ಬೋಧನೆ ಪ್ರಾರಂಭಿಸುವ ಅಭಿಯಾನ ಅಂಗವಾಗಿ ಶಾಲಾ ಆವರಣದಲ್ಲಿ ಮಾಹಿತಿ ಬ್ಯಾನರ್ ಅಳವಡಿಸಿ ಮಾತನಾಡಿದರು.
ಇಂದಿನ ಜಾಗತಿಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಮಾತೃಭಾಷೆಯಲ್ಲಿ ಮಾತ್ರವಲ್ಲದೆ ಇಂಗ್ಲಿಷ್ ಮೇಲೂ ಪ್ರಭುತ್ವ ಹೊಂದುವುದು ಅಗತ್ಯವಾಗಿದೆ. ದ್ವಿಭಾಷಾ ಬೋಧನಾ ಯೋಜನೆ ವಿದ್ಯಾರ್ಥಿಗಳ ಭವಿಷ್ಯ ಬೆಳಗಿಸುವ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದ್ದು, ಗ್ರಾಮೀಣ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬದಲಾವಣೆಗೆ ಕಾರಣವಾಗಲಿದೆ ಎಂದರು.
ಶಾಲೆಯ ಶಿಕ್ಷಕರಾದ ಸಂಗಪ್ಪ ವಕ್ಕಳದ, ರಾಜೇಸಾಬ ಮುಧೋಳ, ದಾವಲಸಾಬ ಮದರಿ, ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net