ತುಮರಿಕೊಪ್ಪಕ್ಕೆ ಬಸ್ ಸಂಚಾರ ಆರಂಭ

ಹನುಮಸಾಗರ ಸಮೀಪದ ತುಮರಿಕೊಪ್ಪ ಗ್ರಾಮಕ್ಕೆ ಸರ್ಕಾರಿ ಬಸ್ ಸಂಚಾರ ಆರಂಭವಾಗಿದ್ದರಿಂದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಬಸ್‌ಗೆ ಪೂಜೆ ಬರಮಾಡಿಕೊಂಡರು. ಪ್ರಮುಖರಾದ ಮರಿಯಪ್ಪ ಎಂ.ಗ್ವಾತಗಿ, ಹನುಮಂತ ಲಂಡೂರಿ, ಹನುಮಂತ ಮೂಗನೂರು, ಮಹಾಂತೇಶ ಪೂಜಾರ, ಯಲ್ಲಪ್ಪ ಮಾದರ ಇತರರಿದ್ದರು.
ಹನುಮಸಾಗರ ಸಮೀಪದ ತುಮರಿಕೊಪ್ಪ ಗ್ರಾಮಕ್ಕೆ ಸರ್ಕಾರಿ ಬಸ್ ಸಂಚಾರ ಆರಂಭವಾಗಿದ್ದರಿಂದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಬಸ್‌ಗೆ ಪೂಜೆ ಬರಮಾಡಿಕೊಂಡರು. ಪ್ರಮುಖರಾದ ಮರಿಯಪ್ಪ ಎಂ.ಗ್ವಾತಗಿ, ಹನುಮಂತ ಲಂಡೂರಿ, ಹನುಮಂತ ಮೂಗನೂರು, ಮಹಾಂತೇಶ ಪೂಜಾರ, ಯಲ್ಲಪ್ಪ ಮಾದರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಸ್ ಸಂಚಾರ ಆರಂಭ

ತುಮರಿಕೊಪ್ಪಕ್ಕೆ ಬಸ್ ಸಂಚಾರ ಆರಂಭ

ಹನುಮಸಾಗರ: ಸಮೀಪದ ತುಮರಿಕೊಪ್ಪ ಗ್ರಾಮಕ್ಕೆ ಶುಕ್ರವಾರ ಸರ್ಕಾರಿ ಬಸ್ ಆಗಮಿಸಿದ್ದರಿಂದ ಗ್ರಾಮಸ್ಥರು ಸಂಭ್ರಮದಿಂದ ಬಸ್‌ಗೆ ಪೂಜೆ ಸಲ್ಲಿಸಿ ಸಿಹಿ ಹಂಚಿ ಬರಮಾಡಿಕೊಂಡರು.
ಕುಷ್ಟಗಿ-ಬದಾಮಿ, ಗಜೇಂದ್ರಗಡ-ಗುಡೂರ ಮುಖ್ಯರಸ್ತೆಯಿಂದ 2 ಕಿ.ಮೀ. ಅಂತರದಲ್ಲಿರುವ ತುಮರಿಕೊಪ್ಪ ಗ್ರಾಮಕ್ಕೆ 25 ವರ್ಷಗಳಿಂದ ಚುನಾವಣೆ ಸಂದರ್ಭ ಹೊರತುಪಡಿಸಿ ಉಳಿದ ದಿನಗಳಲ್ಲಿ ಸರ್ಕಾರಿ ಬಸ್ ಬಂದಿರಲಿಲ್ಲ. ಇದರಿಂದ ಗ್ರಾಮಸ್ಥರು ಖಾಸಗಿ ವಾಹನ ಅವಲಂಬಿಸಬೇಕಾಗಿತ್ತು. ವಿದ್ಯಾರ್ಥಿಗಳಿಗೆ ನಿತ್ಯ ಕಾಲ್ನಡಿಗೆ ಅನಿವಾರ್ಯವಾಗಿತ್ತು.
ಗ್ರಾಮಕ್ಕೆ ಬಸ್ ಸಂಚಾರ ಆರಂಭಿಸುವಂತೆ ವಿದ್ಯಾರ್ಥಿಗಳು ಇತ್ತೀಚೆಗೆ ಶಾಸಕ ದೊಡ್ಡನಗೌಡ ಎಚ್.ಪಾಟೀಲ್ ಹಾಗೂ ಕುಷ್ಟಗಿ, ಗಜೇಂದ್ರಗಡ ಡಿಪೋ ಮ್ಯಾನೇಜರ್‌ಗೆ ಮನವಿ ಸಲ್ಲಿಸಿದ್ದರು. ಶಾಸಕರು, ಅಧಿಕಾರಿಗಳಿಗೆ ಒತ್ತಡ ಹೇರಿ ಗ್ರಾಮಕ್ಕೆ ಬಸ್ ಬರುವಂತೆ ಮಾಡಿದ್ದು, ಕಾಲ್ನಡಿಗೆಯಲ್ಲಿ ಹೋಗುವ ವಿದ್ಯಾರ್ಥಿಗಳು ಇಂದು ಬಸ್‌ನಲ್ಲಿ ಶಾಲಾ, ಕಾಲೇಜುಗಳಿಗೆ ತೆರಳಿದರು. 

ಗ್ರಾಮಸ್ಥರು ಬಸ್‌ಗೆ ಪೂಜೆ ಸಲ್ಲಿಸಿ ಚಾಲಕ ಹಾಗೂ ನಿರ್ವಾಹಕರನ್ನು ಸನ್ಮಾನಿಸಿದರು. ಬೆಳಗ್ಗೆ 2, ಮಧ್ಯಾಹ್ನದ ನಂತರ 2 ಬಸ್‌ಗಳು ನಿತ್ಯ ಗ್ರಾಮಕ್ಕೆ ಬರಲಿವೆ.
ಪ್ರಮುಖರಾದ ಮರಿಯಪ್ಪ ಎಂ.ಗ್ವಾತಗಿ, ಹನುಮಂತ ಲಂಡೂರಿ, ಹನುಮಂತ ಮೂಗನೂರು, ಮಹಾಂತೇಶ ಪೂಜಾರ, ಯಲ್ಲಪ್ಪ ಮಾದರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net