ಕಂಪಸಾಗರಕ್ಕೆ ಬಸ್ ಸಂಚಾರ ಆರಂಭ

ಕಂಪಸಾಗರ ಗ್ರಾಮಕ್ಕೆ ಬಸ್ ಸಂಚಾರ ಆರಂಭವಾದ ಕಾರಣ ಗ್ರಾಮಸ್ಥರು ಪೂಜೆ ಸಲ್ಲಿಸುವ ಮೂಲಕ ಸಂಚಾರಕ್ಕೆ ಚಾಲನೆ ನೀಡಿದರು.
ಕಂಪಸಾಗರ ಗ್ರಾಮಕ್ಕೆ ಬಸ್ ಸಂಚಾರ ಆರಂಭವಾದ ಕಾರಣ ಗ್ರಾಮಸ್ಥರು ಪೂಜೆ ಸಲ್ಲಿಸುವ ಮೂಲಕ ಸಂಚಾರಕ್ಕೆ ಚಾಲನೆ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಪರ್ಕ
  • ಕಲ್ಪಿಸುವ
  • ಹೊಸ ಬಸ್‌ಗೆ
ಮುನಿರಾಬಾದ್: ಸ್ಥಳೀಯ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಬಹುದಿನಗಳ ಬೇಡಿಕೆಗೆ ಕೊನೆಗೂ ಮುಕ್ತಿ ಸಿಕ್ಕಿದ್ದು, ವಿಜಯನಗರ ಜಿಲ್ಲೆಯ ಹೊಸಪೇಟೆ ವಿಭಾಗವು ಕಂಪಸಾಗರ ಗ್ರಾಮಕ್ಕೆ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿದೆ. ಈ ಹೊಸ ಬಸ್‌ಗೆ ಗ್ರಾಮಸ್ಥರು ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಸಂಚಾರಕ್ಕೆ ಬುಧವಾರ ಚಾಲನೆ ನೀಡಿದರು.
ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಸಾರಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸಾರಿಗೆ ಸಂಸ್ಥೆಯು ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹೊಸ ಬಸ್ ಮಾರ್ಗವು ಹುಲಿಗಿ ಸುತ್ತ್ತಲಿನ ಕಂಪಸಾಗರ, ಅಗಳಕೇರಾ ಹಾಗೂ ಶಿವಪುರ ಹಳ್ಳಿಗಳ ಜನರಿಗೆ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವರದಾನವಾಗಿ ಪರಿಣಮಿಸಲಿದೆ.
ಗ್ರಾಮದ ಪ್ರಮುಖರಾದ ಕಾಸೀಂಸಾಬ್ ನದಾಫ್, ಮಾರೆಪ್ಪ ಗುರಳಪುಡಿ, ನಾಗಪ್ಪ ಮುಂಡರಗಿ, ಅಣ್ಣಯ್ಯ ಈಳಿಗೇರ್, ಅಂಜಿನಪ್ಪ ನಾಯಕ, ಬಸವರಾಜ ಪೂಜಾರ್, ರಾಘು ವಾಲಿಕಾರ್, ಕನಕರಾಯ ನಾಯಕ್, ಶಿವುಕುಮಾರ್, ಖಾಜಸಾಬ್, ಗೋಪಿ ಚೌರದ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net