ಕುಕನೂರು: ಪಟ್ಟಣದ ಡಿಪೋದಲ್ಲಿ ನಿಂತಿದ್ದ ಸಾರಿಗೆ ಸಂಸ್ಥೆಯ ಬಸ್ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಸುಟ್ಟು ಭಸ್ಮವಾದ ಘಟನೆ ಮಂಗಳವಾರ ನಡೆದಿದೆ.
ನಗರದ ಎಸ್‌ಎಫ್‌ಎಸ್ ಶಾಲೆಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹುಬ್ಬಳ್ಳಿ ಪ್ರವಾಸಕ್ಕೆ ಹೊತೊಯ್ದಿದ್ದ ಬಸ್ ರಾತ್ರಿ ಡಿಪೋಗೆ ಬಂದ ನಂತರ ದುರಸ್ತಿಗೆ ಬಿಡಲಾಗಿತ್ತು. ಏಕಾಏಕಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟಿದ್ದು, ಸ್ಥಳೀಯ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅವಘಡ ತಪ್ಪಿಸಿದ್ದಾರೆ.
ಡಿಪೋ ಮ್ಯಾನೇಜರ್ ಸಿ.ವೆಂಕಟಾಛಲಪತಿ ಮಾತನಾಡಿ, ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಬಸ್ ಸುಟ್ಟಿದ್ದು, ಇದರಿಂದ ಲಕ್ಷಾಂತರ ರೂ. ನಷ್ಟವಾಗಿದೆ. ಇಂಥ ಪ್ರಕರಣಗಳು ವಿರಳವಾಗಿದ್ದು, ಎಲ್ಲ ಬಸ್‌ಗಳ ಬಗ್ಗೆ ಜಾಗೃತಿ ವಹಿಸಲಾಗುವುದು ಎಂದರು.