ಮಸಬಹಂಚಿನಾಳ ಹಾಗೂ ಬೆಣಕಲ್ ಗ್ರಾಮಗಳ ಹಳ್ಳಕ್ಕೆ 3 ಕೋಟಿ ರೂ. ವೆಚ್ಚದಲ್ಲಿ 6 ವರ್ಷಗಳ ಹಿಂದೆಯೇ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ. ಆದರೆ, ಇದುವರೆಗೂ ನೀರು ಸಂಗ್ರಹಣೆಗೆ ಆಧಾರವಾದ ಗೇಟ್‌ಗಳನ್ನು ಅಳವಡಿಸಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ್ ಅವರು ಅಂತರ್ಜಲ ಹೆಚ್ಚಳದ ಉದ್ದೇಶದಿಂದ ಯೋಜನೆ ತರುವ ಕಾರ್ಯ ಮಾಡಿದ್ದು, ಅದು ಅಲ್ಲಿಗೇ ನಿಂತಿದೆ.