ಹುಲಿಗೆಮ್ಮ ದೇವಿ ಜಾತ್ರೆಗೆ ವಿಧ್ಯುಕ್ತ ಚಾಲನೆ

ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಶ್ರೀಮಾತೆಗೆ ಪೂಜೆ ಸಲ್ಲಿಸಿ ಸಂಪ್ರದಾಯದಂತೆ ಕಂಕಣ ಧಾರಣೆ ಕಾರ್ಯಕ್ರಮ ನೆರವೇರಿಸಲಾಯಿತು.
ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಶ್ರೀಮಾತೆಗೆ ಪೂಜೆ ಸಲ್ಲಿಸಿ ಸಂಪ್ರದಾಯದಂತೆ ಕಂಕಣ ಧಾರಣೆ ಕಾರ್ಯಕ್ರಮ ನೆರವೇರಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸ್ತ್ರೋಕ್ತವಾಗಿ ನೆರವೇರಿದ ಕಂಕಣ ಧಾರಣೆ
  • ಸುಕ್ಷೇತ್ರದಲ್ಲಿ ಕಳೆಗಟ್ಟಿದ ಸಂಭ್ರಮ
ಮುನಿರಾಬಾದ್: ಸಮೀಪದ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಶನಿವಾರ ಅಧಿಕೃತ ಚಾಲನೆ ದೊರೆಯಿತು. ಒಂದು ತಿಂಗಳ ಕಾಲ ಜರುಗಲಿರುವ ಪರಿಷೆ ನಿಮಿತ್ತ ದೇವಿಗೆ ವಿಶೇಷ ಪೂಜೆ, ಸಂಪ್ರದಾಯದಂತೆ ಕಂಕಣ ಧಾರಣೆ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ಜಾತ್ರೆ ಆರಂಭದ ಸಂಕೇತವಾಗಿ ಶನಿವಾರ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಹೋಮ-ಹವನಗಳು ಹಾಗೂ ಅಭಿಷೇಕಗಳು ನಡೆದವು. ಅರ್ಚಕರು ಶಾಸ್ತ್ರೋಕ್ತವಾಗಿ ದೇವಿಗೆ ಕಂಕಣ ಧಾರಣೆ ವಿಧಿವಿಧಾನ ಪೂರೈಸಿದರು.
ಪುರಾತನ ಸಂಪ್ರದಾಯ ಪಾಲನೆ:
ಕಂಕಣ ಧಾರಣೆ ವಿಧಿ-ವಿಧಾನಗಳು ನಡೆಯುವ ಸಂದರ್ಭದಲ್ಲಿ ದೇವಸ್ಥಾನದ ಪುರಾತನ ಸಂಪ್ರದಾಯ ಕಟ್ಟುನಿಟ್ಟಾಗಿ ಪಾಲಿಸಲಾಯಿತು. ಧಾರ್ಮಿಕ ಕಾರ್ಯಕ್ರಮದ ಪಾವಿತ್ರ್ಯ ಕಾಪಾಡುವ ದೃಷ್ಟಿಯಿಂದ ದೇವಸ್ಥಾನ ಸುತ್ತಮುತ್ತ ಭಕ್ತರ ಪ್ರವೇಶ ತಾತ್ಕಾಲಿಕ ನಿಬರ್ಂಧಿಸಲಾಗಿತ್ತು. ಅರ್ಚಕರು, ಸಂಬಂಧಿಸಿದ ಗಣ್ಯರ ಸಮ್ಮುಖದಲ್ಲಿ ಅತ್ಯಂತ ಭಕ್ತಿಯಿಂದ ಕಂಕಣ ಧಾರಣೆ ಕಾರ್ಯ ಜರುಗಿತು. ಂತರ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸುತ್ತಿದ್ದಂತೆಯೇ, ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಅಪಾರ ಭಕ್ತರು ದೇವಿಯ ದರ್ಶನ ಪಡೆದರು. ಒಂದು ತಿಂಗಳ ಕಾಲ ಕ್ಷೇತ್ರದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಭಕ್ತರಿಗಾಗಿ ದೇವಸ್ಥಾನ ಆಡಳಿತ ಮಂಡಳಿ ಸೂಕ್ತ ವ್ಯವಸ್ಥೆ ಮಾಡಿಕೊಂಡಿದೆ.
ಪ್ರಾಣಿಬಲಿ-ಮದ್ಯ ಮಾರಾಟ ನಿಷೇಧಕ್ಕೆ ಕ್ರಮ ಕೈಗೊಳ್ಳಿ
ಕೊಪ್ಪಳ: ಶ್ರೀ ಕ್ಷೇತ್ರ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಪ್ರಾಣಿಬಲಿ ಮತ್ತು ಮದ್ಯಪಾನ ನಿಷೇಧಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಸಿ ಡಾ. ಸುರೇಶ ಬಿ. ಇಟ್ನಾಳ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೊಸಪೇಟೆ, ಶಿವಪುರ ರಸ್ತೆ, ಹಿಟ್ನಾಳ, ಹೊಸೂರಿನಿಂದ ನದಿ ವಾರ್ಗದಲ್ಲಿ ಚಕ್ ಪೋಸ್ಟ್‌ಳನ್ನು ನಿರ್ಮಿಸಿ ಕ್ಷೇತ್ರಕ್ಕೆ ಯಾವುದೇ ಪ್ರಾಣಿಗಳನ್ನು ತರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪ್ರಾಣಿ ಬಲಿ ನಿಷೇಧಗೊಳಿಸಲು ಧ್ವನಿವರ್ಧಕ ಮತ್ತು ಸೂಚನಾ ಫಲಕಗಳ ಮೂಲಕ ಅಲ್ಲದೇ ವ್ಯಾಪಕ ಪ್ರಚಾರಕ್ಕೆ ಕ್ರಮ ಕೈಗೊಳ್ಳಬೇಕು. ಮದ್ಯವ್ಯಸನಿಗಳಿಂದ ಜಾತ್ರೆಯಲ್ಲಿ ಗಲಾಟೆ ಆಗುವುದನ್ನು ತಡೆಯಲು ಹಾಗೂ ದೇವಿ ಮಹಾರಥೋತ್ಸವ ದಿನ ಹುಲಿಗಿ, ಹೊಸಳ್ಳಿ, ಸಿಂಗಾಪೂರ, ಹಿಟ್ನಾಳ ಗ್ರಾಮಗಳಲ್ಲಿ ಮದ್ಯ ವಾರಾಟ ನಿಷೇಧಕ್ಕೆ ಅಬಕಾರಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಡಿಸಿ ಡಾ. ಸುರೇಶ ಬಿ. ಇಡ್ನಾಳ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net