ಬಿಪಿಎಲ್ ಕಾರ್ಡ್‌ದಾರರು ಇ-ಕೆವೈಸಿ ಮಾಡಿಸಿ

ಕನಕಗಿರಿಯ ತಾಪಂನಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಜರತ್ ಹುಸೇನ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಬುಧವಾರ ನಡೆಯಿತು.
ಕನಕಗಿರಿಯ ತಾಪಂನಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಜರತ್ ಹುಸೇನ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಬುಧವಾರ ನಡೆಯಿತು.
Published on

ಕನಕಗಿರಿ: ಇ-ಕೆವೈಸಿ ಮಾಡಿಸಿ ಐದು ವರ್ಷ ಆಗಿದ್ದರೆ ಬಿಪಿಎಲ್ ಕಾರ್ಡ್ ಫಲಾನುಭವಿಗಳು ಕಡ್ಡಾಯವಾಗಿ ಮತ್ತೊಮ್ಮೆ ಮಾಡಿಸಿ ಅನ್ನಭಾಗ್ಯ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಹಜರತ್ ಹುಸೇನ್ ಹೇಳಿದರು. 

ತಾಪಂನಲ್ಲಿ ಬುಧವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಟ್ಟಕಡೆಯ ಫಲಾನುಭವಿಗೂ ಪಂಚ ಗ್ಯಾರಂಟಿ ಯೋಜನೆ ತಲುಪುತ್ತಿರುವ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಲಾಗುತ್ತದೆ. ಮುಂದಿನ ತಿಂಗಳಿಂದ ರಾಜ್ಯ ಸರ್ಕಾರದ ಪಡಿತರ ಅಕ್ಕಿಯೂ ಫಲಾನುಭವಿಗಳಿಗೆ ದೊರೆಯಲಿದ್ದು, ಆಗ ಎರಡು ಬಾರಿ ಹೆಬ್ಬೆಟ್ಟು ಒತ್ತಬೇಕು.
ರಾಜ್ಯದಲ್ಲಿ ನಡೆಯುತ್ತಿರುವ ಗ್ಯಾರಂಟಿ ಪರಿಷ್ಕರಣೆಯಿಂದ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಮೃತರ ಖಾತೆಗೆ ಹೋಗುತ್ತಿದ್ದ 90 ಲಕ್ಷ ರೂ. ಮರುಪಾವತಿಸಿಕೊಳ್ಳಲಾಗಿದೆ. ಆದರೆ, ಇದರಿಂದ ಫಲಾನುಭವಿಗಳು ಆತಂಕಪಡುವ ಅವಶ್ಯವಿಲ್ಲ. ಆ ಕುಟುಂಬದ ಹಿರಿಯ ಮಹಿಳೆ ಯೋಜನೆಯ ಲಾಭ ಪಡೆಯಲು ಅವಕಾಶವಿದ್ದು, ಅಂಥವರು ಅರ್ಜಿ ಸಲ್ಲಿಸಬೇಕು. ಆ ಕುಟುಂಬವನ್ನು ಗುರುತಿಸಲು ಅಂಗನವಾಡಿ ಕಾರ್ಯಕರ್ತರು ಮುಂದಾಗಬೇಕು ಎಂದು ತಿಳಿಸಿದರು. 
ಗ್ಯಾರಂಟಿ ಸಮಿತಿ ಸದಸ್ಯರಾದ ಚನ್ನಬಸವನಗೌಡ ಪಾಟೀಲ್, ಕನಕಪ್ಪ ತಳವಾರ, ಜೆಸ್ಕಾಂ ಶಾಖಾಧಿಕಾರಿಗಳಾದ ಸಿದ್ದಲಿಂಗಪ್ಪ, ವೀರೇಶ, ಸಿಡಿಪಿಒ ವಿಜಯಲಕ್ಷ್ಮೀ, ಆಹಾರ ಶಿರಸ್ತೇದಾರ್ ಬಸವರಾಜ ಅಂಗಡಿ, ಉದ್ಯೋಗ ವಿನಿಮಯ ಕಚೇರಿಯ ನೌಕರ ಹನುಮೇಶ, ಡಿಪೋ ಮ್ಯಾನೇಜರ್ ಪ್ರವೀಣ ಯರನಾಳ, ಸಂಚಾರ ನಿಯಂತ್ರಕ ಶ್ರೀರಾಮ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net