ಯಲಬುರ್ಗಾ: ತಾಲೂಕಿನ ಎನ್.ಜರಕುಂಟಿ ಗ್ರಾಮದಲ್ಲಿ ಸೋಮವಾರ ಸಿಡಿಲು ಬಡಿದು ಬಾಲಕ ಮಂಜುನಾಥ ಮುದೇಗೌಡ ಗೌಡ್ರ (14) ಮೃತಪಟ್ಟಿದ್ದಾನೆ. ಗ್ರಾಮದ ಹೊರ ವಲಯದಲ್ಲಿ ಕುರಿ ಮೇಯಿಸಿಕೊಂಡು ಮನೆಗೆ ಬರುವಾಗ ಸಿಡಿಲು ಬಡಿದಿದೆ. ಈತ ತಾಲೂಕಿನ ಹಗೆದಾಳ ಗ್ರಾಮ ನಿವಾಸಿಯಾಗಿದ್ದು, ತಾಯಿ ತವರು ಮನೆಯಾದ ಎನ್.ಜರಕುಂಟಿ ಗ್ರಾಮದಲ್ಲಿ ಕುರಿ ಸಾಕಣೆ ಮಾಡಿ ಉಪ ಜೀವನ ಸಾಗಿಸುತ್ತಿದ್ದರು. ಬೇವೂರು ಪಿಎಸ್‌ಐ ಎಸ್.ಪಿ.ನಾಯ್ಕ, ತಹಸೀಲ್ದಾರ್ ಪ್ರಶಾಂತ ಎಂ.ನಾಶಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಪರಿಹಾರ ಭರಿಸುವುದಾಗಿ ತಿಳಿಸಿದರು.