ಸದೃಢ ಸಮಾಜಕ್ಕೆ ಸಂಸ್ಕಾರಯುತ ಶಿಕ್ಷಣ ಅಗತ್ಯ

ಅಳವಂಡಿ ಸಮೀಪದ ಹಟ್ಟಿ ಗ್ರಾಮದ ಸಮಾಹಿಪ್ರಾ ಶಾಲೆಯಲ್ಲಿ ವಾರ್ಷಿಕೊತ್ಸವ ಕಾರ್ಯಕ್ರಮದಲ್ಲಿ ಸಾಹಿತಿ ಯಲ್ಲಪ್ಪ ಹರ್ನಾಳಗಿ ಅವರು ರಚಿಸಿದ ನಿನ್ನ ಮನೆಯ ಬಾಗಿಲಲ್ಲಿ ಪುಸ್ತಕ ಬಿಡುಗಡೆ ಮಾಡಲಾಯಿತು. ಕುರಿ ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್.ಗೌಡರ, ಪ್ರಮುಖರಾದ ಭರಮಪ್ಪ ನಗರ, ನೀಲಪ್ಪ ಕರಿಗಾರ, ತೋಟಪ್ಪ ಶಿಂಟ್ರ, ಹೊನ್ನಪ್ಪಗೌಡ, ಗುಡದಪ್ಪ ಇತರರಿದ್ದರು.
ಅಳವಂಡಿ ಸಮೀಪದ ಹಟ್ಟಿ ಗ್ರಾಮದ ಸಮಾಹಿಪ್ರಾ ಶಾಲೆಯಲ್ಲಿ ವಾರ್ಷಿಕೊತ್ಸವ ಕಾರ್ಯಕ್ರಮದಲ್ಲಿ ಸಾಹಿತಿ ಯಲ್ಲಪ್ಪ ಹರ್ನಾಳಗಿ ಅವರು ರಚಿಸಿದ ನಿನ್ನ ಮನೆಯ ಬಾಗಿಲಲ್ಲಿ ಪುಸ್ತಕ ಬಿಡುಗಡೆ ಮಾಡಲಾಯಿತು. ಕುರಿ ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್.ಗೌಡರ, ಪ್ರಮುಖರಾದ ಭರಮಪ್ಪ ನಗರ, ನೀಲಪ್ಪ ಕರಿಗಾರ, ತೋಟಪ್ಪ ಶಿಂಟ್ರ, ಹೊನ್ನಪ್ಪಗೌಡ, ಗುಡದಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕುರಿ ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್.ಗೌಡರ ಸಲಹೆ
ಅಳವಂಡಿ: ದೇಶದ ಭವಿಷ್ಯ ಶಾಲಾ ಕೊಠಡಿಗಳಲ್ಲಿದೆ. ಸದೃಢ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂದು ಕುರಿ ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್.ಗೌಡರ ಹೇಳಿದರು.
ಸಮೀಪದ ಹಟ್ಟಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾರ್ಷಿಕೊತ್ಸವ, ಸ್ನೇಹ ಸಮ್ಮೇಳನ, ಪುಸ್ತಕ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಮೂರ್ತಿಗಳಾದರೆ, ಶಿಕ್ಷಕರು ಶಿಲ್ಪಿಗಳು ಆದಾಗ ಮಾತ್ರ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸದೃಢ ಸಮಾಜ ಕಟ್ಟಲು ಸಾಧ್ಯ. ಪ್ರಾಥಮಿಕ ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯದ ಬುನಾದಿ ಭದ್ರ ಆಗಲಿದೆ ಎಂದರು. ಮುಖಂಡ ಭರಮಪ್ಪ ನಗರ ಮಾತನಾಡಿ, ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕಾದರೆ ಶಿಕ್ಷಕರು ಮತ್ತು ಪಾಲಕರು ಶ್ರಮಿಸಬೇಕು. ಮಕ್ಕಳ ಶಿಕ್ಷಣದ ಬಗ್ಗೆ ಪಾಲಕರು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ತಿಳಿಸಿದರು.
ಸಾಹಿತಿ ಹಾಗೂ ಶಿಕ್ಷಕ ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ಅವರ ನಿನ್ನ ಮನದ ಬಾಗಿಲಲ್ಲಿ ಎಂಬ ಭಾವಗೀತೆಗಳ ಪುಸ್ತಕ ಬಿಡುಗಡೆ ಮಾಡಲಾಯಿತು.
ಪ್ರಮುಖರಾದ ಭರಮಪ್ಪ ನಗರ, ನೀಲಪ್ಪ ಕರಿಗಾರ, ತೋಟಪ್ಪ ಶಿಂಟ್ರ, ಹೊನ್ನಪ್ಪಗೌಡ ಪಾಟೀಲ್, ಗುಡದಪ್ಪ ಚಿಲವಾಡಗಿ, ದ್ಯಾಮಣ್ಣ ಕರಿಗಾರ, ನಿಂಗನಗೌಡ ಪಾಟೀಲ್, ರಮೇಶ ಹಳ್ಳಿಕೇರಿ, ಹನುಮಪ್ಪ, ಗುಡದಪ್ಪ ಚಂಡೂರ, ಸಂಜಯ ಚೌಡಾಳ, ಹನುಮಗೌಡ್ರ, ಈರಪ್ಪ ಕರಿಗಾರ, ಬಸವರಾಜ ಕರಿಗಾರ, ಯಮನೂರಪ್ಪ ಶಿಂಟ್ರ, ವೆಂಕರಡ್ಡಿ ಇಮ್ಮಡಿ, ಫಕೀರಸಿದ್ದಪ್ಪ ಚೌಡಕಿ, ದೇವೇಂದ್ರಪ್ಪ ಹಳ್ಳಿ, ಹನುಮಂತ ಗುಡಿ, ಮಾಳವ್ವ ಗೊರವರ, ಇಬ್ರಾಹಿಮಸಾಬ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net