ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ಮಾತನಾಡಿ, ರೈತರ ಪಂಪ್‌ಸೆಟ್‌ಗಳಿಗೆ ಸತತ ಏಳು ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು. ಬಿಜೆಪಿ ಮಂಡಲ ಕಚೇರಿಯಿಂದ ತಹಸಿಲ್ ಕಚೇರಿವರೆಗೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ತಹಸೀಲ್ದಾರ ಚಂದ್ರಶೇಖರ ಗಾಳಿಗೆ ಮನವಿ ಸಲ್ಲಿಸಿದರು. ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ಸಜ್ಜನ್, ಕಾರ್ಯದರ್ಶಿ ಗ್ಯಾನಪ್ಪ ಗಾಣದಾಳ, ಪ್ರಕಾಶ ಹಾದಿಮನಿ, ಉಪಾಧ್ಯಕ್ಷ ಕನಕಪ್ಪ ಯಾದವ್, ಪಪಂ ಸದಸ್ಯರಾದ ಶೇಷಪ್ಪ ಪೂಜಾರ, ಹನುಮಂತ ಬಸರಿಗಿಡ, ಸುರೇಶ ಗುಗ್ಗಳಶೆಟ್ರ, ಪ್ರಮುಖರಾದ ಸಿದ್ರಾಮಗೌಡ ಉಪ್ಪಳ, ಅಯ್ಯನಗೌಡ, ಹನುಮಂತರೆಡ್ಡಿ, ಶಿವಕುಮಾರ ಕೋರಿಶೆಟ್ಟರ, ಹರೀಶ ಬಂಕಾಪುರ, ಬಸವರಾಜ ಕೋರಿ, ಮಂಜುನಾಥ ಯತ್ನಟ್ಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.