ಬಿಜೆಪಿಗರಿಗೆ ಒಬ್ಬರನ್ನು ಕಂಡರೆ ಒಬ್ಬರಿಗಾಗದು

ಶಿವರಾಜ ತಂಗಡಗಿ.
ಶಿವರಾಜ ತಂಗಡಗಿ.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಶಿವರಾಜ ತಂಗಡಗಿ ಟೀಕೆ
  • ಆರ್​ಎಸ್​ಎಸ್​ ನೋಂದಣಿ ಕಡ್ಡಾಯ

ಕೊಪ್ಪಳ : ಬಿಜೆಪಿ ನಾಯಕರಿಂದ ನಾವು ಪಾಠ ಕಲಿಯಬೇಕಿಲ್ಲ. ಅವರ ಮನೆಯೊಂದು, ನೂರು ಬಾಗಿಲಾಗಿವೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಟೀಕಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಿಜೆಪಿಗರಿಗೆ ನಮ್ಮ ಕೆಲಸ ನೋಡಿಸಹಿಸಲಾಗದು. ಅವರಲ್ಲಿ ಒಗ್ಗಟ್ಟು, ಶಿಸ್ತು ಇಲ್ಲ. ಮೆಯೊಂದು ನೂರು ಬಾಗಿಲಾಗಿವೆ. ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್​.ಅಶೋಕ್​, ಸುನಿಲ್​ ಕುಮಾರ್​, ಸಿ.ಟಿ.ರವಿ ಅವರಿಗೆ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗದು. ಇವರೆಲ್ಲರನ್ನು ಕಂಡರೆ ಛಲವಾದಿ ನಾರಾಯಣ ಸ್ವಾಮಿಗೆ ಆಗುವುದಿಲ್ಲ. ಜ್ವಲಂತ ಸಮಸ್ಯೆ ಬಗ್ಗೆ ಚರ್ಚಿಸಲು ಅವರಿಗೆ ಸಮಯ ಇಲ್ಲ. ಕಾಂಗ್ರೆಸ್​ ಭಾರತ ಜೋಡೋ ಮಾಡಿದರೆ, ಅವರು ಭಾರತ ತೋಡೋ ಮಾಡುತ್ತಿದ್ದಾರೆ. ಅವರಿಗೆ ಕೇವಲ ಸಂಘ ಪರಿವಾರ ಜೋಡಿಸುವ ಕೆಲಸ ಇದೆ ಎಂದು ವಾಗ್ದಾಳಿ ನಡೆಸಿದರು.
ಮೊದಲು ಬಿಜೆಪಿಯವರು ಆರ್​ಎಸ್​ಎಸ್​ ಕಚೇರಿ ಮೇಲೆ ಧ್ವಜ ಹಾರಿಸಿ ರಾಷ್ಟ್ರಗೀತೆ ಹಾಡಲಿ. ಅವರಿಂದ ನಾವು ರಾಷ್ಟ್ರಪ್ರೇಮ ಕಲಿಯಬೇಕಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್​. ವಿಜಯನಗರ ಜಿಲ್ಲೆಯಲ್ಲಿ ಸ್ಥಳಿಯವಾಗಿ ಕೆಲ ಸಮಸ್ಯೆಗಳಿವೆ. ಶಾಸಕರ ನಡುವೆ ಗೊಂದಲ ಇದೆ. ಅದಕ್ಕೆ ಸಚಿವ ಜಮೀರ್​ಖಾನ್​ ನನಗೆ ಉಸ್ತುವಾರಿ ಬೇಡ, ಧ್ವಜಾರೋಹಣಕ್ಕೆ ಹೋಗುವುದಿಲ್ಲ ಎಂದಿದ್ದಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಸಮರ್ಥಿಸಿಕೊಂಡರು.
ಸಿಎಂ ಡಿ.ಕೆ.ಶಿವಕುಮಾರ್​ 100 ದಿನ ಅಧಿಕಾರ ಪೂರೈಸಿದ್ದಾರೆ. ಅನೇಕ ಜನಪರ ಯೋಜನೆ ನೀಡಿದ್ದಾರೆ. ಬಾಕಿ ಎರಡು ವರ್ಷ ಉತ್ತಮ ಆಡಳಿತ ನಡೆಸುತ್ತೆವೆ. 2028ರಲ್ಲಿ ಮತ್ತೆ ಅವರ ನೇತೃತ್ವದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ತರಬೇಕು. ಅವರನ್ನು ಮತ್ತೊಮ್ಮೆ ಸಿಎಂ ಮಾಡುತ್ತೇವೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
"

ಸಂಘ ಪರಿವಾರದವರು ಈ ದೇಶದ ಪ್ರಜೆಗಳಲ್ಲವಾ ? ಜಿಬಿಎ ವ್ಯಾಪ್ತಿಯಲ್ಲಿ ಒಂದು ನಾಯಿ ಸಾಕಿದರೂ ನೋಂದಣಿ ಮಾಡಿಸಬೇಕು. ಇವರೂ ನೋಂದಣಿ ಮಾಡಲೇಬೇಕು. ಎಲ್ಲೆಲ್ಲಿಂದಲೋ ಹಣ ಬರುತ್ತಿದೆ. ಅದರ ಲೆಕ್ಕ ಕೊಡುವ ಭಯ ಅವರಿಗೆ ಕಾಡುತ್ತಿದೆ. ಅದಕ್ಕೆ ನೋಂದಣಿ ಮಾಡಿಸಲ್ಲ ಎನ್ನುತ್ತಾರೆ. ನಾವು ನೋಂದಣಿ ಮಾಡುವವರೆಗೆ ಬಿಡುವುದಿಲ್ಲ. ಮಾಡಿಸದಿದ್ದರೆ ಮುಂದೇನು ಮಾಡಬೇಕು ಅದನ್ನು ಮಾಡುತ್ತೇವೆ.

— ಶಿವರಾಜ ತಂಗಡಗಿ. ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸತಿ ಸಚಿವ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net