ವಾಜಪೇಯಿ ಚತುರ-ದೂರದೃಷ್ಟಿ ಆಡಳಿತಗಾರ

ಗಂಗಾವತಿ ಬಿಜೆಪಿ ಕಚೇರಿಯಲ್ಲಿ ಪಕ್ಷದ ವಿವಿಧ ಮೋರ್ಚಾದಿಂದ ಮಾಜಿ ಪ್ರಧಾನಿ ದಿ.ಅಟಲ್‌ಬಿಹಾರಿ ವಾಜಪೇಯಿ ಜನ್ಮದಿನ ಗುರುವಾರ ಆಚರಿಸಲಾಯಿತು. ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ  ಸಿಂಗನಾಳ ವಿರೂಪಾಕ್ಷಪ್ಪ, ಜಿಪಂ ಮಾಜಿ ಸದಸ್ಯ ಎಚ್.ಎಂ.ಸಿದ್ರಾಮಯ್ಯಸ್ವಾಮಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಗಾಲಿ ಜನಾರ್ದರನೆಡ್ಡಿ ಅಭಿಮತ
  • ಅಟಲ್‌ಬಿಹಾರಿ ವಾಜಪೇಯಿ ಜನ್ಮದಿನ ಆಚರಣೆ
ಗಂಗಾವತಿ: ನಗರದ ಬಿಜೆಪಿ ಕಚೇರಿಯಲ್ಲಿ ಪಕ್ಷದ ವಿವಿಧ ಮೋರ್ಚಾದಿಂದ ಮಾಜಿ ಪ್ರಧಾನಿ ದಿ.ಅಟಲ್‌ಬಿಹಾರಿ ವಾಜಪೇಯಿ ಜನ್ಮದಿನ ನಿಮಿತ್ತ ಸುಶಾಸನ ದಿನ ಗುರುವಾರ ಆಚರಿಸಲಾಯಿತು.
ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಶಾಸಕ ಗಾಲಿ ಜನಾರ್ದರನೆಡ್ಡಿ ಮಾತನಾಡಿ, ದೂರದೃಷ್ಟಿ ಆಡಳಿತಗಾರ ವಾಜಪೇಯಿ ಆಡಳಿತಾವಧಿಯಲ್ಲಿ ಜಾರಿಗೊಂಡ ಜನಪರ ಯೋಜನೆಗಳು ಇಂದಿಗೂ ಮಾನ್ಯವಾಗಿದ್ದು, ಎಲ್ಲ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡುತ್ತಿದ್ದರು. ಸ್ವಚ್ಛ ಮತ್ತು ಪಾರದರ್ಶಕ ಆಡಳಿತಕ್ಕೆ ವಾಜಪೇಯಿ ಮಾದರಿಯಾಗಿದ್ದು, ಅವರ ಆದರ್ಶಗಳನ್ನು ಯುವ ರಾಜಕಾರಣಿಗಳು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಚತುಷ್ಪಥ ರಸ್ತೆ ಯೋಜನೆ ವಾಜಪೇಯಿ ಆಡಳಿತದಲ್ಲಿ ಜಾರಿಗೊಂಡಿದ್ದು, ಇದರಿಂದ ದೇಶದ ಬಹುತೇಕ ರಾಜ್ಯಗಳ ಹೆದ್ದಾರಿಗಳು ಸುಸ್ಥಿಯಲ್ಲಿವೆ. ಸರಕುಸಾಗಣೆಗೆ ಪೂರಕವಾಗುವಂತೆ ಹೆದ್ದಾರಿ ಅಭಿವೃದ್ಧಿಪಡಿಸಿದ್ದರು ಎಂದರು.
ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಜಿಪಂ ಮಾಜಿ ಸದಸ್ಯ ಎಚ್.ಎಂ. ಸಿದ್ರಾಮಯ್ಯಸ್ವಾಮಿ, ವಿವಿಧ ಮೋರ್ಚಾ ಪದಾಧಿಕಾರಿಗಳಾದ ಜಿ.ಶ್ರೀಧರ್, ವೀರೇಶ ಬಲ್ಕುಂದಿ, ಡಿ.ಕೆ.ಆಗೋಲಿ, ಪಂಪಣ್ಣನಾಯಕ, ರೇಖಾರಾಯಭಾಗಿ, ಶಿವಪ್ರಕಾಶ ಅಕ್ಕಿ, ಆರ್.ಎನ್.ರಾಯಭಾಗಿ, ಎಚ್.ಎಂ.ವಿರೂಪಾಕ್ಷಯ್ಯಸ್ವಾಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net