ಹೈಕ ವಿಮೋಚನೆಗೆ ಭೀಮಜ್ಜ-ಪುಂಡಲೀಕಪ್ಪ ಕೊಡುಗೆ ಅಪಾರ

ಕುಷ್ಟಗಿ ಬಸವ ಭವನದಲ್ಲಿ ಆಯೋಜಿಸಿದ್ದ ಮುರಡಿ ಭೀಮಜ್ಜ ಹಾಗೂ ಪುಂಡಲೀಕಪ್ಪ ಜ್ಞಾನ ಮೋಟೆ ಅವರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಲಾಯಿತು. ಮಾಜಿ ಶಾಸಕ ಕೆ ಶರಣಪ್ಪ ವಕೀಲ, ಶಾಸಕ ದೊಡ್ಡನಗೌಡ ಪಾಟೀಲ, ಕೊಪ್ಪಳ ವಿವಿ ಕುಲಪತಿ ಡಾ ಎಸ್ ವಿ ಡಾಣಿ, ಪ್ರಮುಖರಾದ ಗುರುವರ್ಯ ಯಶವಂತ ಬೋದಲೆ, ದೇವೇಂದ್ರಪ್ಪ ಬಳೂಟಗಿ, ವೀರೇಶ ಬಂಗಾರಶೆಟ್ಟರ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಬಡ
  • ಅಂಗವಿಕಲ
  • ವಿದ್ಯಾರ್ಥಿಗಳಿಗೆ

ಕುಷ್ಟಗಿ :

ಹೈದರಾಬಾದ್ ವಿಮೋಚನಾ ಚಳವಳಿಯಲ್ಲಿ ಈ ಭಾಗದ ಯುವ ಸಮೂಹವನ್ನು ಕಟ್ಟಿಕೊಂಡು ನಿಜಾಮರ ವಿರುದ್ಧ ಹೋರಾಟ ಮಾಡಿದವರು ಮುರಡಿ ಭೀಮಜ್ಜ ಹಾಗೂ ಮಾಜಿ ಶಾಸಕ ಪುಂಡಲೀಕಪ್ಪ ಜ್ಞಾನಮೋಠೆ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.

ಬಸವ ಭವನದಲ್ಲಿ ಭಾನುವಾರ ಮುರಡಿ ಭೀಮಜ್ಜ ತಪೋಭೂಮಿ ಟ್ರಸ್ಟ್ ಹಾಗೂ ಭಾವಸಾರ ಬಂಧು ಸೇವಾ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಿದ್ದ ಸ್ವಾತಂತ್ರೃ ಹೋರಾಟಗಾರರಾದ ಮುರಡಿ ಭೀಮಜ್ಜ ಹಾಗೂ ಮಾಜಿ ಶಾಸಕ ಪುಂಡಲೀಕಪ್ಪ ಜ್ಞಾನಮೋಠೆ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುರಡಿ ಭೀಮಜ್ಜ ಅವರ ಪುಣ್ಯ ಸ್ಮರಣೆಯನ್ನು ಮಾಜಿ ಶಾಸಕ ಪುಂಡಲೀಕಪ್ಪ ಅವರು ಪ್ರತಿ ವರ್ಷ ಆಚರಿಸುತ್ತ ಗುರುವನ್ನು ಸ್ಮರಿಸುತ್ತಿದ್ದರು. ಅದರಂತೆ ಮೊಮ್ಮಕ್ಕಳು ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಹಾಗೂ ಹೋರಾಟದ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸದ ಮೂಲಕ ತಿಳಿಸುತ್ತಿರುವುದು ಶ್ಲಾಘನೀಯ. ಪುಂಡಲೀಕಪ್ಪ ಜ್ಞಾನಮೋಠೆ ಅವರೊಂದಿಗೆ ನನ್ನ ತಂದೆ ಹನುಮಗೌಡ ಒಡನಾಟವಿತ್ತು. ಅವರ ಸಲಹೆ ಪಡೆಯುವ ಭಾಗ್ಯ ನನಗೆ ದೊರೆತಿತ್ತು ಎಂದು ಸ್ಮರಿಸಿದರು.
ಅಮೃತರಾಜ ಜ್ಞಾನಮೋಠೆ ಅವರಿಂದ ಬಡ ಮತ್ತು ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಶಿವಪ್ಪ ನೀರಾವರಿ, ಕಿಶನ್‌ರಾವ್ ಕುಲಕರ್ಣಿ, ಎ.ವೈ.ಲೋಕರೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net