ಬೆಳಗ್ಗೆ ದುರ್ಗಾದೇವಿ, ತಾಯಮ್ಮದೇವಿಗೆ ವಿಶೇಷ ಪೂಜೆ ಪುನಸ್ಕಾರ, ಅಭಿಷೇಕ ಸಹಸ್ರ ಬಿಲ್ವಾರ್ಚನೆ ಹಾಗೂ ಹೂಗಳಿಂದ ಅಲಂಕಾರ ಸೇರಿದಂತೆ ಮುಂತಾದ ಕಾರ್ಯಕ್ರಮಗಳು ನಡೆದವು. ನಂತರ ಮಹಿಳೆಯರ ಕಳಸ, ಬಾಜಾ ಭಜಂತ್ರಿ, ನಂದಿಕೋಲು ಹಾಗೂ ಮೋರನಾಳ, ಬೈರಾಪುರ, ಇತರ ಗ್ರಾಮಗಳ ಡೊಳ್ಳು ಹಾಗೂ ಇತರ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಂಗಾಸ್ಥಳಕ್ಕೆ ಪೂಜೆಗೆ ತೆರಳಲಾಯಿತು. ಗಂಗಾಪೂಜೆ ನಂತರ ಗ್ರಾಮದ ಭಕ್ತರು ದೀರ್ಘ ದಂಡ ನಮಸ್ಕಾರ ಹಾಕಿ ಹರಿಕೆ ಸಲ್ಲಿಸಿದರು. ದೇವಿಯರಿಗೆ ಉಡಿ ತುಂಬುವ ಕಾರ್ಯ ನಡೆಯಿತು. ನಂತರ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.