ಕಷ್ಟದ ಕೆಲಸ ಯಶಸ್ವಿಗೊಂಡಾಗ ಸ್ಮರಣೆ

ಕನಕಗಿರಿ ಭಗೀರಥ ವೃತ್ತದಲ್ಲಿ ಭಗೀರಥ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ವಿಶ್ವನಾಥ ಮುರುಡಿ, ಸಿಡಿಪಿಒ ವಿರೂಪಾಕ್ಷಿ, ಪ್ರಮುಖರಾದ ಸುರೇಶ ಪೂಜಾರ, ವೆಂಕೋಬ ಪೂಜಾರ ಇತರರಿದ್ದರು.
ಕನಕಗಿರಿ ಭಗೀರಥ ವೃತ್ತದಲ್ಲಿ ಭಗೀರಥ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ವಿಶ್ವನಾಥ ಮುರುಡಿ, ಸಿಡಿಪಿಒ ವಿರೂಪಾಕ್ಷಿ, ಪ್ರಮುಖರಾದ ಸುರೇಶ ಪೂಜಾರ, ವೆಂಕೋಬ ಪೂಜಾರ ಇತರರಿದ್ದರು.
Published on
ಕನಕಗಿರಿ: ಭಗೀರಥ ಮಹರ್ಷಿ ಕೈಗೊಂಡ ಕಠಿಣ ತಪಸ್ಸು, ಸಾಧನೆಯಿಂದ ಗಂಗೆಯೇ ಧರೆಗೆ ಬರುವಂತೆ ಮಾಡಿದರು ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳಿದರು.
ಇಲ್ಲಿನ ಮಹರ್ಷಿ ಭಗೀರಥ ವೃತ್ತದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಭಗೀರಥ ಜಯಂತಿಯಲ್ಲಿ ಮಾತನಾಡಿದರು.
ಭಗೀರಥರು ಶಿವನ ಜಟೆಯಿಂದ ಗಂಗೆಯನ್ನು ಭೂಮಿಗೆ ತರುವಲ್ಲಿ ಶ್ರಮಿಸಿದ್ದಾರೆ. ಅದಕ್ಕಾಗಿ ನಾವುಗಳು ಸಾಮಾನ್ಯವಾಗಿ ಯಾವುದೇ ಕಷ್ಟದ ಕೆಲಸದಲ್ಲಿ ಯಶಸ್ವಿಯಾದಾಗ ಭಗೀರಥ ಯತ್ನ ಮಾಡಿ ಸಾಧನೆ ಮಾಡಿದಂತಾಗಿದೆ ಎನ್ನುವುದು ವಾಡಿಕೆ. ಅಂಥ ಹೆಸರನ್ನು ಭಗೀರಥರು ಇಂದಿಗೂ ಉಳಿಸಿಕೊಂಡಿರುವುದು ಅವರ ಕಠಿಣ ಶ್ರಮವೇ ಕಾರಣವಾಗಿದೆ. ಭಗೀರಥರು ಕೇವಲ ಒಂದು ಜಾತಿಗೆ ಸೀಮಿತವಾಗದೇ ಕಷ್ಟದ ಕೆಲಸ ಯಶಸ್ವಿಗೊಂಡಾಗಲೆಲ್ಲಾ ಎಲ್ಲ ವರ್ಗದವರು ಸ್ಮರಿಸುತ್ತಾರೆ ಎಂದು ತಿಳಿಸಿದರು.
ಸಿಡಿಪಿಒ ವಿರೂಪಾಕ್ಷಿ ಮಾತನಾಡಿ, ಭಗೀರಥ ಸಮಾಜವು ಸಣ್ಣ ಸಮುದಾಯವಾದರೂ ಎಲ್ಲ ಸಮುದಾಯಗಳೊಂದಿಗೆ ಬೆರೆತು ಸಾಮರಸ್ಯದಿಂದ ಬದುಕುತ್ತಾರೆ ಎಂದರು.
ಪಪಂ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಸದಸ್ಯ ಹನುಮಂತ ಬಸರಿಗಿಡ, ಶೇಷಪ್ಪ ಪೂಜಾರ, ರಾಕೇಶ ಕಂಪ್ಲಿ, ಗಂಗಾಧರ ಚೌಡ್ಕಿ, ಪ್ರಮುಖರಾದ ಸುರೇಶ ಪೂಜಾರ, ನಾಗೇಶ ಉಪ್ಪಾರ, ದುರ್ಗೇಶ ಗದ್ದಿ, ಶಿವಪ್ಪ ಪೂಜಾರ, ವೆಂಕಟೇಶ ಪೂಜಾರ, ಹನುಮಂತಪ್ಪ ಬಿಸ್ನಳ್ಳಿ, ಹನುಮಂತ ಪೂಜಾರ, ಕನಕಪ್ಪ ಪೂಜಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net