ಉತ್ತಮ ಜೀವನಕ್ಕೆ ವ್ಯಸನಮುಕ್ತರಾಗಿ

ಕುಷ್ಟಗಿಯ ಮದ್ಯ ಮತ್ತು ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರಕ್ಕೆ ಗೃಹರಕ್ಷಕ ದಳದ ಘಟಕಾಧಿಕಾರಿ ರವಿಂದ್ರ ಬಾಕಳೆ ಭೇಟಿ ನೀಡಿ ಪುಸ್ತಕ ವಿತರಿಸಿದರು.
ಕುಷ್ಟಗಿಯ ಮದ್ಯ ಮತ್ತು ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರಕ್ಕೆ ಗೃಹರಕ್ಷಕ ದಳದ ಘಟಕಾಧಿಕಾರಿ ರವಿಂದ್ರ ಬಾಕಳೆ ಭೇಟಿ ನೀಡಿ ಪುಸ್ತಕ ವಿತರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಗೃಹರಕ್ಷಕ ದಳದ ಘಟಕಾಧಿಕಾರಿ ರವಿಂದ್ರ ಬಾಕಳೆ ಹೇಳಿಕೆ
  • ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರಕ್ಕೆ ಭೇಟಿ
ಕುಷ್ಟಗಿ: ಸಮಾಜಕ್ಕೆ ಕಂಟಕವಾಗುವ ಮದ್ಯ ವ್ಯಸನದಿಂದ ಕೌಟುಂಬಿಕ ಜೀವನ ಹಾಗೂ ಆರೋಗ್ಯ ಹದಗೆಡುತ್ತದೆ ಎಂದು ಗೃಹರಕ್ಷಕ ದಳದ ಘಟಕಾಧಿಕಾರಿ ರವಿಂದ್ರ ಬಾಕಳೆ ಹೇಳಿದರು.
ನಗರದ ಜಗಜೀವನರಾಮ್ ಸಮುದಾಯ ಭವನದಲ್ಲಿ ಪರಿವಾರ ಸಮೃದ್ಧಿ ಸೇವಾ ಟ್ರಸ್ಟ್ ಮತ್ತು ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಮದ್ಯ ಮತ್ತು ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದರು. ದುಶ್ಚಟಗಳಿಂದ ಮುಕ್ತಿ ಹೊಂದಿ ಸಮಾಜದಲ್ಲಿ ಮಾದರಿಯಾಗಿ ಬದುಕಬೇಕು. ಕಥೆಗಳು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಚಿಸಲಾಗಿದ್ದು, ಪುಸ್ತಕ ಓದುವುದರಿಂದ ಬದುಕು ಹಸನಾಗುತ್ತದೆ.
ವ್ಯಸನಮುಕ್ತ ಕೇಂದ್ರ ಆರಂಭಿಸಿ ಸುಶಿಕ್ಷಿತ ನಾಗರಿಕರನ್ನಾಗಿ ಬದಲಾಯಿಸುವ ಕೆಲಸ ಶ್ಲಾಘನೀಯ ಎಂದರು. ವ್ಯಸನಿಗಳಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸಲು ಅವರು ರಚಿಸಿದ ಕೂಡಿಟ್ಟ ಕನಸು ಪುಸ್ತಕಗಳನ್ನು ನೀಡಿದರು. ಪೇದೆ ಮಾರುತಿ ಪೂಜಾರ್, ಪರಿವಾರ ಸಮೃದ್ಧಿ ಸೇವಾ ಟ್ರಸ್ಟ್ ಮುಖ್ಯಸ್ಥ ಹನಮಂತ ಪೂಜಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net