ಬೆಂಕಿ ಅವಘಡ ಸಂಭವಿಸದಂತೆ ಎಚ್ಚರಿಕೆ ವಹಿಸಿ

ಯಲಬುರ್ಗಾ ತಾಲೂಕಿನ ಕುಡಗುಂಟಿ ರೈತ ಗವಿಸಿದ್ದಪ್ಪ ಗೆದಗೇರಿ ಅವರಿಗೆ ಜಿಪಂ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ್ ವೈಯಕ್ತಿಕವಾಗಿ ಧನಸಹಾಯ ಮಾಡಿದರು. ಗ್ರಾಮಸ್ಥರಾದ ವೀರೇಶ ಮ್ಯಾಗಳಮಠ, ಶಂಕರಗೌಡ ಪಾಟೀಲ್, ಶಂಕ್ರಪ್ಪ ಹರಿಜನ, ಶರಣಪ್ಪ ಹಾದಿಮನಿ, ದೇವಪ್ಪ ಗುರಿಕಾರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮೇವಿನ
  • ಬಣವೆ
  • ಬೆಂಕಿ
ಯಲಬುರ್ಗಾ: ತಾಲೂಕಿನ ಕುಡಗುಂಟಿ ಗ್ರಾಮದ ರೈತ ಗವಿಸಿದ್ದಪ್ಪ ಗೆದಗೇರಿ ಅವರ ಮೇವಿನ ಬಣವೆ ಬೆಂಕಿಯಿಂದ ಸುಟ್ಟ ಹಿನ್ನೆಲೆಯಲ್ಲಿ ಜಿಪಂ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ್ ರೈತನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ವೈಯಕ್ತಿಕ ಧನಸಹಾಯ ಮಾಡಿದರು.
ಬಳಿಕ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ರೈತರು ಜಾನುವಾರುಗಳ ರಕ್ಷಣೆ ಸಲುವಾಗಿ ಹೊಟ್ಟು ,ಮೇವು ಬೆಂಕಿಗೆ ಆಹುತಿಯಾಗಿ ಸಂಕಷ್ಟ ಎದುರಿಸುವಂತಾಗುತ್ತದೆ.
ಬೇಸಿಗೆಯಲ್ಲಿ ಬೆಂಕಿ ಅವಘಡ ಸಂಭವಿಸುವುದು ಹೆಚ್ಚಾಗಿದ್ದು, ರೈತರು ಎಚ್ಚರ ವಹಿಸಬೇಕು ಎಂದರು. ಗ್ರಾಮಸ್ಥರಾದ ಸಣ್ಣೀರಪ್ಪ ಹಾದಿಮನಿ, ಶಿವ ಬಸಪ್ಪ ಸಣ್ಣಖರಡದ, ಶರಣಪ್ಪ ತಳವಾರ, ಮುತ್ತಪ್ಪ ತಳವಾರ, ಭರಮಪ್ಪ ಗುರಿಕಾರ, ಹಿರೇಹನಮಪ್ಪ ಬೊಮ್ಮನಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net