ಕೋಳಿ ಮಾಂಸ, ಮೊಟ್ಟೆಯನ್ನು 70 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶದಲ್ಲಿ 10 ನಿಮಿಷ ಬೇಯಿಸಬೇಕು. ಜನರು ಆತಂಕಕ್ಕೊಳಗಾಗದೆ ಮುಂಜಾಗ್ರತಾ ಕ್ರಮ ಪಾಲಿಸಿ.ಫಾರಂನಲ್ಲಿ ಕೆಲಸ ಮಾಡುವವರಿಗೂ ಅರಿವು ಮೂಡಿಸಿ. ಕೋಳಿ ಅಥವಾ ಇತರ ಪಗಳು ಅಸಹಜವಾಗಿ ಸತ್ತರೆ ಪಶುವೈದ್ಯರಿಗೆ ಮಾಹಿತಿ ನೀಡಿ. ಕೆರೆ, ಕಟ್ಟೆ, ನದಿ ಹಾಗೂ ನೀರಿನ ತೊರೆಗಳಲ್ಲಿ ಸತ್ತ ಪಕ್ಷಿಗಳು ಕಂಡುಬಂದರೆ ವರದಿ ಮಾಡಿ. ಶಂಕಿತ ಹಕ್ಕಿ ಜ್ವರ ಪ್ರಕರಣವಾಗಿದ್ದಲ್ಲಿ ತಕ್ಷಣ ತಂಡ ನಿಯೋಜಿಸಿ ಪರಿಶೀಲಿಸಿ. ಅವಶ್ಯವಿದ್ದರೆ ಹಿಕ್ಕೆ, ರಕ್ತ ಹಾಗೂ ಸತ್ತ ಕೋಳಿಗಳ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸುವಂತೆ ನಿರ್ದೇಶಿಸಿದರು.