ಬಸವೇಶ್ವರ ಜಯಂತಿ ಏ.20ಕ್ಕೆ

ಕನಕಗಿರಿಯ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಮಹನೀಯರ ಜಯಂತಿ ಸಭೆಯಲ್ಲಿ ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಮಾತನಾಡಿದರು. ಸಿಡಿಪಿಒ ವಿರುಪಾಕ್ಷ, ಪ್ರಮುಖರಾದ ವಾಗೇಶ ಹಿರೇಮಠ, ಮಹಾಂತೇಶ ಸಜ್ಜನ್, ಶರಣಪ್ಪ ಭತ್ತದ್ ಇತರರಿದ್ದರು.
ಕನಕಗಿರಿಯ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಮಹನೀಯರ ಜಯಂತಿ ಸಭೆಯಲ್ಲಿ ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಮಾತನಾಡಿದರು. ಸಿಡಿಪಿಒ ವಿರುಪಾಕ್ಷ, ಪ್ರಮುಖರಾದ ವಾಗೇಶ ಹಿರೇಮಠ, ಮಹಾಂತೇಶ ಸಜ್ಜನ್, ಶರಣಪ್ಪ ಭತ್ತದ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಮಾಹಿತಿ
  • ಕನಕಗಿರಿ ಮಹನೀಯರ ಜಯಂತಿ ಪೂರ್ವಭಾವಿ ಸಭೆ
ಕನಕಗಿರಿ: ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಇಲ್ಲಿನ ಸುವರ್ಣಗಿರಿ ಸಂಸ್ಥಾನ ಮಠದ ಸಹಯೋಗದಲ್ಲಿ ಸಡಗರದಿಂದ ಆಚರಿಸಲಾಗುವುದು ಎಂದು ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಹೇಳಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಬಸವೇಶ್ವರ ಜಯಂತಿ ಹಾಗೂ ಇನ್ನೀತರ ಮಹನೀಯರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಏ.20ರ ಬಸವೇಶ್ವರ ಜಯಂತಿ ನಿಮಿತ್ತ ಬೆಳಗ್ಗೆ ಬಸವೇಶ್ವರ ವೃತ್ತದಲ್ಲಿ ಪೂಜೆ ಸಲ್ಲಿಸಲಾಗುವುದು. ಅಂದು ಸಂಜೆ ಬಸವೇಶ್ವರ ಮೂರ್ತಿಯನ್ನು ಡೊಳ್ಳು, ವಾದ್ಯಗಳೊಂದಿಗೆ ಕಲ್ಮಠದಿಂದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ಮಾಡಲಾಗುವುದು ಎಂದರು.
ಇನ್ನು ಏ.21ರಂದು ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಕಚೇರಿಗಳಲ್ಲಿ ಪೂಜೆ ಸಲ್ಲಿಸಲಾಗುವುದು. ಏ.23ರಂದು ಭಗೀರಥ ಮಹರಾಜರ ಜಯಂತಿ, ಮೇ 1ರಂದು ಭಗವಾನ್ ಬುದ್ಧರ ಜಯಂತಿಯನ್ನು ಆಯಾ ಮಹನೀಯರ ವೃತ್ತಗಳಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಸರಳವಾಗಿ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಿಡಿಪಿಒ ವಿರೂಪಾಕ್ಷ, ಪಪಂ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಖಜಾನಾಧಿಕಾರಿ ದುರ್ಗಾಸಿಂಗ್, ಪ್ರಮುಖರಾದ ವಾಗೇಶ ಹಿರೇಮಠ, ಮಹಾಂತೇಶ ಸಜ್ಜನ್, ಶರಣಪ್ಪ ಭತ್ತದ್, ಟಿ.ಜೆ.ರಾಮಚಂದ್ರ, ಶ್ರೀನಿವಾಸ ಅಯ್ಯರ್, ಬಿ.ವಿ.ಜೋಷಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net