ಬಸವಣ್ಣ-ಬಾಬಾಸಾಹೇಬರ ಆದರ್ಶ ಪಾಲಿಸಿ

ಗಂಗಾವತಿ ಶರಣಬಸವೇಶ್ವರ ಕ್ಯಾಂಪ್‌ನಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡ ಜಗಜ್ಯೋತಿ ಬಸವೇಶ್ವರ ಮತ್ತು  ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ದಾರ್ಶನಿಕರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಮಾಜಿ ಶಾಸಕ ಪರಣ್ಣಮುನವಳ್ಳಿ, ನಗರಸಭೆ ಮಾಜಿ ಉಪಾಧ್ಯಕ್ಷ ಶರಣಪ್ಪ ಹುಡೇಜಾಲಿ, ಮಾಜಿ ಸದಸ್ಯ ಕೃಷ್ಣಪ್ಪ ಅಧಿಕಾರಿ, ಪ್ರಮುಖರಾದ ದುರುಗೇಶ ದೊಡ್ಮನಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕುಂಭ
  • ಕಳಸ
  • ಭಾವಚಿತ್ರ
ಗಂಗಾವತಿ: ಬಸವಣ್ಣ ಮತ್ತು ಅಂಬೇಡ್ಕರ್ ಅವರ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಹಕ್ಕುಗಳ ಸಂದೇಶಗಳನ್ನು ಸಮಾಜದ ಎಲ್ಲ ವರ್ಗಗಳಿಗೆ ತಲುಪಿಸುವ ಕಾರ್ಯ ಮಾಡಬೇಕಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ನಗರದ ಶರಣಬಸವೇಶ್ವರ ಕ್ಯಾಂಪ್‌ನಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಆಚರಿಸಿದ ಜಗಜ್ಯೋತಿ ಬಸವೇಶ್ವರ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.
ವಾರ್ಡ್‌ನಾದ್ಯಂತ ದಾರ್ಶನಿಕರು ಮತ್ತು ಮಹನೀಯರ ಭಾವಚಿತ್ರಗಳನ್ನು ಕುಂಭ, ಕಳಸದೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನೆರವೇರಿಸಲಾಯಿತು. ಪ್ರಮುಖರಾದ ರಮೇಶ ಹತ್ತಿಮರದ, ಶಿವಪ್ಪ ಮಾದಿಗ, ರಾಮಚಂದ್ರಪ್ಪ, ಚಂದ್ರಶೇಖರ್ ಕುಂಬಾರ್, ಶರಣಪ್ಪ, ಶಿವಪುತ್ರಪ್ಪ, ಯಮನೂರಪ್ಪ ಹತ್ತಿಮರದ, ಬಸವರಾಜ ಹಂಚಿನಾಳ್, ಹನುಮಂತಪ್ಪ ತಾಳಗೇರಿ, ಬಸವರಾಜ ಹಡಪದ್, ಎಸ್.ಎಚ್.ಮುಧೋಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net