ನಾಡಿಗೆ ಬಸವಣ್ಣ ಕೊಡುಗೆ ಅಪಾರ

ಕುಷ್ಟಗಿ ಸಮೀಪದ ವನಜಬಾವಿ ಗ್ರಾಮದಲ್ಲಿ ರಾಷ್ಟ್ರೀಯ ಬಸವದಳದಿಂದ ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಸವ ದಳದ ಗೌರವಾಧ್ಯಕ್ಷ ದೇವಪ್ಪ ಕೋಳೂರು, ಶ್ರೀ ವಿರತೀಶಾನಂದ ಸ್ವಾಮೀಜಿ, ಡಾ.ಲಿಂಗಾನಂದ ಸ್ವಾಮೀಜಿ ಇತರರಿದ್ದರು.
ಕುಷ್ಟಗಿ ಸಮೀಪದ ವನಜಬಾವಿ ಗ್ರಾಮದಲ್ಲಿ ರಾಷ್ಟ್ರೀಯ ಬಸವದಳದಿಂದ ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಸವ ದಳದ ಗೌರವಾಧ್ಯಕ್ಷ ದೇವಪ್ಪ ಕೋಳೂರು, ಶ್ರೀ ವಿರತೀಶಾನಂದ ಸ್ವಾಮೀಜಿ, ಡಾ.ಲಿಂಗಾನಂದ ಸ್ವಾಮೀಜಿ ಇತರರಿದ್ದರು.
Published on
ಕುಷ್ಟಗಿ: ಸಮೀಪದ ವನಜಭಾವಿ ಗ್ರಾಮದಲ್ಲಿ ರಾಷ್ಟ್ರೀಯ ಬಸವದಳದಿಂದ 893ನೇ ಬಸವ ಜಯಂತಿ ಕಾರ್ಯಕ್ರಮ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ದಳದ ಗೌರವಾಧ್ಯಕ್ಷ ದೇವಪ್ಪ ಕೋಳೂರು ಮಾತನಾಡಿ, ಬಸವಣ್ಣ ನಾಡಿಗೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಅಂತವರ ಸನ್ಮಾರ್ಗದಡಿ ನಾವೆಲ್ಲರೂ ಮುನ್ನಡೆಯಬೇಕಿದೆ. ವಚನ ಸಾಹಿತ್ಯದ ತತ್ವಾದರ್ಶಗಳಂತೆ ನಡೆಯುವವರು ಮಾತ್ರ ವ್ಯಕ್ತಿಗತ ದೋಷಗಳನ್ನು ನಿವಾರಿಸಿಕೊಂಡು ನೆಮ್ಮದಿಯಿಂದ ಬದುಕಲು ಸಾಧ್ಯವಿದೆ ಎಂದು ತಿಳಿಸಿದರು.
ಮನಗೂಳಿ ವಿರಕ್ತಮಠದ ವಿರತೀಶಾನಂದ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ಸಮಾಜಕ್ಕೆ ಕಲ್ಪಿಸಿಕೊಟ್ಟಂತ ಮೂರು ಮಹತ್ವದ ತತ್ವಗಳಾದ ಕಾಯಕ, ದಾಸೋಹ ಮತ್ತು ಇಷ್ಟಲಿಂಗ ಪೂಜೆಯನ್ನು ಮಾಡುತ್ತಾ ಸಾಗಿದರೆ ಸಮಸ್ಯೆಯಿಂದ ಮುಕ್ತಿ ಹೊಂದಬಹುದು ಎಂದರು. ಡಾ.ಲಿಂಗಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.
ತಾಪಂ ಮಾಜಿ ಸದಸ್ಯ ರುದ್ರಪ್ಪ ಮರಕಟ್, ಶರಣರಾದ ಬಸವರಾಜಪ್ಪ ಇಂಗಳದಾಳ, ಬಸವನಗೌಡ ಪೊಲೀಸ್‌ಪಾಟೀಲ್, ಹನಮಂತಪ್ಪ ದಳಪತಿ, ಮಹಾದೇವಪ್ಪ ಚನ್ನಳ್ಳಿ, ಶರಣ ಅಮರೇಶಪ್ಪ ಗಡಿಹಳ್ಳಿ, ಕೃಷ್ಣ ಪತ್ತಾರ್, ಹನಮಗೌಡ ಡಿ.ಗೌಡ್ರ, ಬಸವರಾಜ್ ಹೂಗಾರ, ಶರಣಪ್ಪ ಹೊಸಳ್ಳಿ, ಗಿರಿಮಲ್ಲಪ್ಪ ಪರಂಗಿ, ಚಿದಾನಂದಗೌಡ ಗೊಂದಿ, ನಿಂಗಪ್ಪ ಪರಂಗಿ, ವಿರೂಪಾಕ್ಷಪ್ಪ ಮೇಟಿ, ಪರಮೇಶ್ವರ ಉಚ್ಚಲಕುಂಟಿ, ಹನಮಂತಪ್ಪ ಮೇಟಿ, ಹನಮಂತಪ್ಪ ಹೊರಪೇಟಿ, ಭೀಮನಗೌಡ ಗೌಡ್ರ, ಮಹಾಂತಗೌಡ ಪೊಲೀಸ್ ಪಾಟೀಲ್, ಅಮರೇಶ್ ನಿಡಶೇಸಿ, ಶರಣಪ್ಪ ಗೊಂದಿ, ಸಾವಿತ್ರಮ್ಮ ಆವಾರಿ, ಬಸಮ್ಮ ಹೂಗಾರ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net