ಹಾತಿರಾಮ್ ಬಾಬಾ ಕ್ಷೇತ್ರದ ಪ್ರಗತಿಗೆ 1 ಕೋಟಿ ರೂ. ಅನುದಾನ

ಕೊಪ್ಪಳ ತಾಲೂಕಿನ ಬಹದ್ದೂರ್ ಬಂಡಿ ಗ್ರಾಮದಲ್ಲಿ ಸೋಮವಾರ ರಾತ್ರಿ ರಾಷ್ಟ್ರೀಯ ಬಂಜಾರ ಹೋಳಿ ಉತ್ಸವದಲ್ಲಿ ಸಮುದಾಯದ ಪುರುಷರು ಪರಂಪರೆಯ ಉಡುಗೆ ತೋಟ್ಟು ಮಾಡಿದ ನೃತ್ಯ ಗಮನ ಸೆಳೆಯಿತು.
ಕೊಪ್ಪಳ ತಾಲೂಕಿನ ಬಹದ್ದೂರ್ ಬಂಡಿ ಗ್ರಾಮದಲ್ಲಿ ಸೋಮವಾರ ರಾತ್ರಿ ರಾಷ್ಟ್ರೀಯ ಬಂಜಾರ ಹೋಳಿ ಉತ್ಸವದಲ್ಲಿ ಸಮುದಾಯದ ಪುರುಷರು ಪರಂಪರೆಯ ಉಡುಗೆ ತೋಟ್ಟು ಮಾಡಿದ ನೃತ್ಯ ಗಮನ ಸೆಳೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ರಾವೇಂದ್ರ ಹಿಟ್ನಾಳ ೋಷಣೆ
  • ಬಹದ್ದೂರ್ ಬಂಡಿಯಲ್ಲಿ ಬಂಜಾರ ಸಂಸ್ಕೃತಿ ಅನಾವರಣ
ಕೊಪ್ಪಳ: ತಾಲೂಕಿನ ಬಹದ್ದೂರ್ ಬಂಡಿಯ ಹಾತಿರಾಮ್ ಬಾಬಾ ಕ್ಷೇತ್ರದ ಅಭಿವೃದ್ಧಿಗೆ ಸಿಎಂ, ಶಾಸಕ ಅನುದಾನದಲ್ಲಿ 1 ಕೋಟಿ ರೂ. ನೀಡುವುದಾಗಿ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ತಾಲೂಕಿನ ಬಹದ್ದೂರ್ ಬಂಡಿ ಗ್ರಾಮದಲ್ಲಿ ಸೋಮವಾರ ರಾತ್ರಿ ಆಯೋಜಿಸಿದ್ದ ರಾಷ್ಟ್ರೀಯ ಬಂಜಾರ ಹೋಳಿ ಉತ್ಸವದಲ್ಲಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಸವಾಜ ಕಲ್ಯಾಣ ಇಲಾಖೆಯಿಂದ ಬಂಜಾರ ಮಕ್ಕಳಿಗಾಗಿಯೇ ಪ್ರತ್ಯೇಕ ವಸತಿ ಶಾಲೆ ಪ್ರಾರಂಭಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಅವರು, ಸರ್ಕಾರದ ಸೌಲಭ್ಯಗಳನ್ನು ಪಕ್ಷಾತೀತವಾಗಿ ಒದಗಿಸಿ ಕ್ಷೇತ್ರವನ್ನು ವಾದರಿಯನ್ನಾಗಿ ವಾಡೋಣ ಎಂದು ಮನವಿ ಮಾಡಿದರು.
ಬಂಜಾರ ಸವಾಜದ ಇತಿಹಾಸ ಮತ್ತು ಪರಂಪರೆ ಅದ್ಭುತವಾಗಿದೆ. ಅವರ ಉಡುಗೆ, ಸಂಸ್ಕೃತಿ ಕೂಡ ವಿಶಿಷ್ಟವಾಗಿದೆ. ರಾಜ್ಯದಲ್ಲಿ 20 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ಈ ಸಮುದಾಯ, ಇತರರೊಂದಿಗೆ ಅನ್ಯೋನ್ಯವಾಗಿ ಬಾಳುವುದನ್ನು ಕಲಿಸಿಕೊಟ್ಟಿದೆ ಎಂದರು.
ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ವಾತನಾಡಿ, ಲಂಬಾಣಿ ಸಮುದಾಯಕ್ಕೆ ಬಹದ್ದೂರ್ ಬಂಡಿ ಮೆಕ್ಕಾಮದೀನಾ-ಕಾಶಿಯಂತೆ ಪವಿತ್ರ ಕ್ಷೇತ್ರ. ಶಾಸಕರು 1 ಕೋಟಿ ರೂ. ನೀಡಿದರೆ ಸಾಲದು. ಸಮುದಾಯದ ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಇನ್ನೂ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ವಾಡಿದರು.
ವಿಪ ಸದಸ್ಯೆ ಹೇಮಲತಾ ನಾಯಕ ವಾತನಾಡಿ, ಬಂಜಾರ ಸಮುದಾಯಕ್ಕೆ ಕಸೂತಿ ಕಲೆ ದೈವದತ್ತವಾಗಿ ಬಂದಿದೆ. ಜಿಲ್ಲೆಯಲ್ಲಿ ಶಾಸಕರು ಒಂದು ಬಂಜಾರ ಕಸೂತಿ ಕೇಂದ್ರ ಆರಂಭಿಸಬೇಕು. ಇಲ್ಲಿನ ಸ್ಥಗಿತಗೊಂಡಿರುವ ಸಿಸಿ ರಸ್ತೆ ಕಾಮಗಾರಿ ಶ್ರೀ ಆರಂಭವಾಗಬೇಕು. ನನ್ನ ಅನುದಾನದಲ್ಲೂ ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ ಎಂದರು.
ಬಂಜಾರ ಸಮುದಾಯದ ಸಾಂಪ್ರದಾಯಿಕ ಉಡುಗೆತೊಡಿಗೆ, ನೃತ್ಯ ಮತ್ತು ಧಾರ್ಮಿಕ ವಿಧಿವಿಧಾನಗಳೊಂದಿಗೆ ರಾಷ್ಟ್ರೀಯ ಹೋಳಿ ಉತ್ಸವ ಅದ್ದೂರಿಯಾಗಿ ಜರುಗಿತು. ಸಮುದಾಯದ ಆರಾಧ್ಯ ದೈವ ಹಾತಿರಾಮ್ ಬಾಬಾ ತಪಸ್ಸು ವಾಡಿದ ಕಟ್ಟೆಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬಂಜಾರ ಸಂಸ್ಕೃತಿಯ ವೈಭವ ಅನಾವರಣಗೊಳಿಸಲಾಯಿತು.
ಇಡೀ ಗ್ರಾಮ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿತ್ತು. ತೆಲಂಗಾಣ, ಹೈದರಾಬಾದ್ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದಿದ್ದ ಜನರು ಸಾಂಪ್ರದಾಯಿಕ ಉಡುಗೆ ತೊಟ್ಟು ಬೆಳಿಗಿನ ಜಾವದ ತನಕ ಕುಣಿದು ಸಂಭ್ರಮಿಸಿದರು. ಹಾತಿರಾಮ್ ಬಾಬಾ ಕಟ್ಟೆಗೆ ಪೂಜೆ ಮತ್ತು ಸಂತ ಸೇವಾಲಾಲ್ ಸ್ಮರಣೆ ಕಾರ್ಯಕ್ರಮಗಳು ಜರುಗಿದವು.
ಸಮುದಾಯದ ಗುರುಗಳಾದ ಸಿದ್ಧಲಿಂಗ ಮಹಾರಾಜ, ತೆಲಂಗಾಣದ ರಮೇಶಗಿರಿ ಮಹಾಸ್ವಾಮಿ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಸನ್ನ ಗಡಾದ, ಜಿಲ್ಲಾ ವಕೀಲರ ಸಂದ ಅಧ್ಯಕ್ಷ ಎ.ವಿ. ಕಣವಿ, ನಿವೃತ್ತ ಮುಖ್ಯ ಅಭಿಯಂತರ ಶಿವಾನಂದ, ರವಿ ಕುರುಗೋಡ, ಚಾಂದ್‌ಪಾಷಾ, ಕೂಪಳಗಡ್ ಭಾದ್ದರ ಬಂಡಾ ಸೇವಾ ಟ್ರಸ್ಟ್ ಭರತ್ ನಾಯ್ಕ, ಆಲ್ ಇಂಡಿಯಾ ಬಂಜಾರ ಸೇವಾ ಸಂದ ಜಿಲ್ಲಾಧ್ಯಕ್ಷ ಪಿ. ಲಕ್ಷ್ಮಣ ನಾಯ್ಕ, ಕರ್ನಾಟಕ ಪ್ರದೇಶ ಬಂಜಾರ ಲವಾಣಿ ಸೇವಾ ಸಂದ ಜಿಲ್ಲಾಧ್ಯಕ್ಷ ಯಮನೂರಪ್ಪ ನಾಯ್ಕ, ಪರಸ್ಪರ ನಾಯ್ಕ ಕಲಕೇರಿ, ರಾಮಪ್ಪ ಜಾದವ್ ಇತರರಿದ್ದರು.
"

ಬಹದ್ದೂರ್ ಬಂಡಿ ಹಾತಿರಾಮ್ ಬಾಬಾ ಕಟ್ಟೆ ಕಲ್ಯಾಣ ಕರ್ನಾಟಕದ ಪುಣ್ಯಕ್ಷೇತ್ರ. ಇದರ ಉನ್ನತೀಕರಣಕ್ಕೆ ಕನಿಷ್ಠ 5 ಕೋಟಿ ರೂ. ಅನುದಾನದ ಅಗತ್ಯವಿದೆ. ಒಳ ಮೀಸಲಾತಿಯಿಂದ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು, ಅನಿವಾರ್ಯವಾದರೆ ನಾವು ಪ್ರತಿಭಟನೆ ನಡೆಸಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net