ಆಯುರ್ವೇದ ಚಿಕಿತ್ಸೆ ಪರಿಣಾಮಕಾರಿ

ಎನ್‌ಸಿಐಎಸ್‌ಎಂ ಅಧ್ಯಕ್ಷ ಡಾ.ಅಲ್ಲಮಪ್ರಭು ಗುಡ್ಡ ಹೇಳಿಕೆ
ಅಯುರ್ವೇದ
ಗಂಗಾವತಿಯಲ್ಲಿ ಹಮ್ಮಿಕೊಂಡಿದ್ದ ಆಯುರ್ವೇದ ದಿನಾಚರಣೆಯಲ್ಲಿ ಆಲ್ ಇಂಡಿಯಾ ಇನ್ಸಿಟ್ಯೂಟ್ ಅ್ ಅಯುರ್ವೇದ ಪ್ರಾಧ್ಯಾಪಕ ಡಾ.ಕಾಶಿನಾಥ ಸಮಗಂಡಿಗೆ ಧನ್ವಂತರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸ್ಫೂರ್ತಿ ಕಾಲೇಜಿನ ಅಧ್ಯಕ್ಷೆ ನಿರ್ಮಲಾ ಸವಡಿ, ಪ್ರಾಚಾರ್ಯ ಡಾ.ಬಿ.ಎಸ್.ಸವಡಿ ಇತರರಿದ್ದರು.GAYATRI MALIPATIL
Published on: 

ಗಂಗಾವತಿ: ಶಿಕ್ಷಣ ಮತ್ತು ಸಂಶೋಧನೆ ಮೂಲಕ ಆಯುರ್ವೇದ ಚಿಕಿತ್ಸಾ ಪದ್ಧತಿಯಿಂದ ಪರಿಣಾಮಕಾರಿ ಆರೋಗ್ಯ ಸೇವೆ ಒದಗಿಸಬೇಕು ಎಂದು ಆಯುರ್ವೇದ ಬೋರ್ಡ್ ಮತ್ತು ನವದೆಹಲಿಯ ಎನ್‌ಸಿಐಎಸ್‌ಎಂ ಅಧ್ಯಕ್ಷ ಡಾ.ಅಲ್ಲಮಪ್ರಭು ಗುಡ್ಡ ಹೇಳಿದರು.

ಸ್ಫೂರ್ತಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಡಾ.ಎಸ್.ವಿ.ಸವಡಿ ಆಯುರ್ವೇದ ಆಸ್ಪತ್ರೆಯಿಂದ ಗುರುವಾರ ಆಯುರ್ವೇದ ದಿನಾಚರಣೆ ಮತ್ತು ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದರು. ಗುಣಮಟ್ಟದ ಹೊಸ ಪದ್ಧತಿಗಳ ಮೂಲಕ ಆಯುರ್ವೇದ ಭವಿಷ್ಯವನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪ ಮಾಡಬೇಕು. ಆಯುರ್ವೇದ ಪರಂಪರೆ ಸಂಭ್ರಮಿಸುವ ಜತೆಗೆ ಅಭಿವೃದ್ಧಿಗೆ ನೆರವಾಗಬೇಕಿದೆ ಎಂದರು. ಪ್ರಾಚಾರ್ಯ ಡಾ.ಬಿ.ಎಸ್.ಸವಡಿ ಮಾತನಾಡಿ, ಆಯುರ್ವೇದ ಚಿಕಿತ್ಸೆ ಪದ್ಧತಿಯಿಂದ ಪರಿಣಾಮಕಾರಿ ಆರೋಗ್ಯ ಸೇವೆ ಪಡೆಯಬಹುದು. ಪಾರಂಪರಿಕ ಪದ್ಧತಿಯ ಚಿಕಿತ್ಸೆಗೆ ಬೇರೆ ರಾಷ್ಟ್ರಗಳಲ್ಲೂ ಮನ್ನಣೆ ದೊರೆತಿದೆ ಎಂದು ತಿಳಿಸಿದರು. ನಂತರ ಆಯುರ್ವೇದ ಚಿಕಿತ್ಸೆ ಬಗ್ಗೆ ಸಂವಾದ, ಚಿಂತನೆ ಹಾಗೂ ಕಾರ್ಯಯೋಜನೆಗಳ ಬಗ್ಗೆ ಚರ್ಚೆ ನಡೆಯಿತು.

ಆಲ್ ಇಂಡಿಯಾ ಇನ್ಸಿಟ್ಯೂಟ್ ಅ್ ಅಯುರ್ವೇದ ಪ್ರಾಧ್ಯಾಪಕ ಡಾ.ಕಾಶಿನಾಥ ಸಮಗಂಡಿಗೆ ಧನ್ವಂತರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸಂಸ್ಥೆ ಅಧ್ಯಕ್ಷೆ ನಿರ್ಮಲಾ ಸವಡಿ, ಉಪಪ್ರಾಚಾರ್ಯ ಡಾ.ಬಿ.ಎಂ.ಖಾಲಿದ್, ಡೀನ್ ಡಾ.ಜಿ.ಮೋಹನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net