ಮತದಾರರು ಅಗತ್ಯ ಮಾಹಿತಿ ನೀಡಿ ಸಹಕರಿಸಿ

ಎಸ್‌ಐಆರ್ ಅಂಗವಾಗಿ ಕೊಪ್ಪಳ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರಿಂದ ನಡೆದ ಜಾಗೃತಿ ಜಾಥಾಕ್ಕೆ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ದುಂಡಪ್ಪ ತುರಾದಿ ಚಾಲನೆ ನೀಡಿದರು. ಪ್ರಾಚಾರ್ಯ ಶಿವಾನಂದ ಎ.ಆರ್., ಉಪ ಪ್ರಾಚಾರ್ಯ ವಿ.ಜಿ. ಸೂಡಿಮಠ, ತಾಪಂ ಸಹಾಯಕ ನಿರ್ದೇಶಕ ಮಹೇಶ್ ಇದ್ದರು.
ಎಸ್‌ಐಆರ್ ಅಂಗವಾಗಿ ಕೊಪ್ಪಳ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರಿಂದ ನಡೆದ ಜಾಗೃತಿ ಜಾಥಾಕ್ಕೆ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ದುಂಡಪ್ಪ ತುರಾದಿ ಚಾಲನೆ ನೀಡಿದರು. ಪ್ರಾಚಾರ್ಯ ಶಿವಾನಂದ ಎ.ಆರ್., ಉಪ ಪ್ರಾಚಾರ್ಯ ವಿ.ಜಿ. ಸೂಡಿಮಠ, ತಾಪಂ ಸಹಾಯಕ ನಿರ್ದೇಶಕ ಮಹೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಪಂ ಇಒ ದುಂಡಪ್ಪ ತುರಾದಿ ಮನವಿ
  • ಎಸ್‌ಐಆರ್ ಜಾಗೃತಿ ಜಾಥಾ
ಕೊಪ್ಪಳ: ಮತದಾರರ ಪಟ್ಟಿಯನ್ನು ನಿಖರಗೊಳಿಸುವ ಉದ್ದೇಶದಿಂದ ಎಸ್‌ಐಆರ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರತಿಯೊಬ್ಬ ಮತದಾರರೂ ಬೂತ್ ಮಟ್ಟದ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು ಎಂದು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ, ತಾಪಂ ಇಒ ದುಂಡಪ್ಪ ತುರಾದಿ ಮನವಿ ಮಾಡಿದರು.
ಎಸ್‌ಐಆರ್ ಕಾರ್ಯಕ್ರಮದ ಅಂಗವಾಗಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರಿಂದ ಮಂಗಳವಾರ ನಡೆದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಜೂನ್30ರಿಂದ ಜು.29ರವರೆಗೆ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸಲಿದ್ದಾರೆ. ಹೊಸದಾಗಿ ಅರ್ಹರಾದವರು ಮತದಾರರ ಪಟ್ಟಿಗೆ ಸೇರ್ಪಡೆಯಾಗಲು, ಸ್ಥಳಾಂತರಗೊಂಡವರು, ಮರಣ ಹೊಂದಿದವರು ಹಾಗೂ ನಕಲಿ ಹೆಸರುಗಳ ತಿದ್ದುಪಡಿಗೆ ಈ ಅಭಿಯಾನ ಅವಕಾಶ ಕಲ್ಪಿಸಿದೆ. ಬಿಎಲ್‌ಒಗಳು ಮೂರು ಬಾರಿ ಮನೆಗಳಿಗೆ ಭೇಟಿ ನೀಡಲಿದ್ದು, ಪ್ರತಿಯೊಬ್ಬರೂ ಎಸ್‌ಐಆರ್ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸುವ ಮೂಲಕ ಸಹಕರಿಸಬೇಕು ಎಂದು ತಿಳಿಸಿದರು.
ಕಾಲೇಜು ಆವರಣದಿಂದ ಆರಂಭವಾದ ಜಾಥಾವು ಮುಂಡರಗಿ ಭೀಮರಾಯ ಸರ್ಕಲ್, ಅಶೋಕ ಸರ್ಕಲ್, ದಿವಟರ ಸರ್ಕಲ್ ಹಾಗೂ ಮೇದಾರ ಓಣಿಯ ಮೂಲಕ ಸಂಚರಿಸಿ ಮತ್ತೆ ಕಾಲೇಜಿಗೆ ತಲುಪಿತು. ಮತದಾರರ ಜಾಗೃತಿ ಘೋಷಣೆಗಳು ಮತ್ತು ಭಿತ್ತಿಪತ್ರಿಕೆಗಳ ಪ್ರದರ್ಶನದ ಮೂಲಕ ಸಾರ್ವಜನಿಕರ ಗಮನ ಸೆಳೆಯಲಾಯಿತು. ಜಾಥಾದಲ್ಲಿ 650ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಕಾಲೇಜಿನ ಪ್ರಾಚಾರ್ಯ ಶಿವಾನಂದ ಎ.ಆರ್., ಉಪ ಪ್ರಾಚಾರ್ಯ ವಿ.ಜಿ. ಸೂಡಿಮಠ, ತಾಪಂ ಸಹಾಯಕ ನಿರ್ದೇಶಕ ಮಹೇಶ್, ಚುನಾವಣಾ ಸಾಕ್ಷರತಾ ಸಂಘದ ಕಾರ್ಯಕ್ರಮ ಅಧಿಕಾರಿ ಸಿದ್ದಪ್ಪ ಮೇಳಿ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಪರಶುರಾಮ್ ಕೆ., ಉಪನ್ಯಾಸಕ ಮಂಜುನಾಥ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net