ಬದಲಾವಣೆ ನಿಮ್ಮಿಂದಲೇ ಪ್ರಾರಂಭವಾಗಲಿ

ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್‌ಮುಕ್ತ ದಿನ ನಿಮಿತ್ತ ಗಂಗಾವತಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಲಿಟಲ್ ಹಾರ್ಟ್ಸ್ ಶಾಲೆ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು. ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಜಗನ್ನಾಥ ಆಲ್ಲಂಪಲ್ಲಿ, ಖಜಾಂಚಿ ಚೆನ್ನುಪಾಟಿ ಪ್ರಭಾಕರ, ಮುಖ್ಯಶಿಕ್ಷಕಿ ಎಂ.ಪ್ರಿಯಾಕುಮಾರಿ ಇತರರಿದ್ದರು.
ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್‌ಮುಕ್ತ ದಿನ ನಿಮಿತ್ತ ಗಂಗಾವತಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಲಿಟಲ್ ಹಾರ್ಟ್ಸ್ ಶಾಲೆ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು. ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಜಗನ್ನಾಥ ಆಲ್ಲಂಪಲ್ಲಿ, ಖಜಾಂಚಿ ಚೆನ್ನುಪಾಟಿ ಪ್ರಭಾಕರ, ಮುಖ್ಯಶಿಕ್ಷಕಿ ಎಂ.ಪ್ರಿಯಾಕುಮಾರಿ ಇತರರಿದ್ದರು.
Published on
ಗಂಗಾವತಿ: ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್‌ಮುಕ್ತ ದಿನ ನಿಮಿತ್ತ ನಗರದ ಲಿಟಲ್ ಹಾರ್ಟ್ಸ್ ಶಾಲೆ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಶಾಲೆಯಿಂದ ಆರಂಭವಾದ ಜಾಥಾ ಶ್ರೀಕೃಷ್ಣದೇವರಾಯ, ಗಾಂಧಿ ವೃತ್ತದ ಮೂಲಕ ಸಾಗಿ ಬಂದು ಶಾಲಾವರಣದಲ್ಲಿ ಸಮಾರೋಪಗೊಂಡಿತ್ತು. ವೃತ್ತದಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಮತ್ತು ಪ್ಲಾಸ್ಟಿಕ್ ಬಳಸದಂತೆ ಸಂದೇಶ ಸಾರುವ ನೃತ್ಯರೂಪಕ ಪ್ರದರ್ಶಿಸಲಾಯಿತು.
ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಜಗನ್ನಾಥ ಆಲ್ಲಂಪಲ್ಲಿ ಮಾತನಾಡಿ, ಬದಲಾವಣೆ ನಿಮ್ಮಿಂದಲೇ ಪ್ರಾರಂಭವಾಗಬೇಕಿದ್ದು, ಮಕ್ಕಳು ಪ್ಲಾಸ್ಟಿಕ್ ಪ್ರೇರಿತ ವಸ್ತುಗಳನ್ನು ಬಳಸದಂತೆ ಎಚ್ಚರಿಕೆವಹಿಸಬೇಕಿದ್ದು, ಮನೆಯಲ್ಲೂ ಜಾಗೃತಿ ಮೂಡಿಸಬೇಕು ಎಂದರು.
ಇದಕ್ಕೂ ಮುನ್ನ ಮಕ್ಕಳಿಂದ ಬಟ್ಟೆಯ ಬ್ಯಾಗ್ ಹೊಲಿದುಕೊಂಡು ಬರಲು ತಿಳಿಸಿತ್ತಲ್ಲದೇ, ಅದರ ಮೇಲೆ ಪ್ಲಾಸ್ಟಿಕ್ ಬ್ಯಾಗ್ ಬ್ಯಾನ್ ಬಗ್ಗೆ ಸಂದೇಶದ ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ಲಾಸ್ಟಿಕ್ ಬ್ಯಾಗ್ ಬಳಸದಂತೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಜಾಥಾಕ್ಕೆ ಚಾಲನೆ ನೀಡಿದ ನಗರಸಭೆ ಪರಿಸರ ಇಂಜಿನಿಯರ್ ಶರಣಪ್ಪ ಮಾತನಾಡಿದರು. ಶಾಲಾಡಳಿತ ಮಂಡಳಿ ಖಜಾಂಚಿ ಪ್ರಭಾಕರ ಚೆನ್ನುಪಾಟಿ, ನಿರ್ದೇಶಕ ಇಬ್ರಾಹಿಂ, ಮುಖ್ಯಶಿಕ್ಷಕಿ ಎಂ.ಪ್ರಿಯಾಕುಮಾರಿ, ಲಯನ್ಸ್ ಕ್ಲಬ್ ತಾಲೂಕಾಧ್ಯಕ್ಷ ಡಾ.ಜಿ.ದೇವರಾಜ್, ಕಾರ್ಯದರ್ಶಿ ಶಂಕರ ಪಾಟೀಲ್ ಹಾಗೂ ಶಿಕ್ಷಕರಿದ್ದರು. 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net