ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ

ಕೋಳೂರು ಗ್ರಾಮದಲ್ಲಿ ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಆಂದೋಲನದ ಜಾಗೃತಿ ಜಾಥಾಕ್ಕೆ ಬಿಇಒ ಶೇಖರ್ ಹೊರಪೇಟಿ ಚಾಲನೆ ನೀಡಿದರು. ಮುಖ್ಯ ಶಿಕ್ಷಕ ಭೀಮೇಶ, ಪ್ರಮುಖರಾದ  ಸೈಯದ್, ವೀರೇಶ ಮೇಟಿ, ರವಿಚಂದ್ರ, ಹೇಮಾ, ಕಲ್ಲೇಶ ಇತರರಿದ್ದರು.
ಕೋಳೂರು ಗ್ರಾಮದಲ್ಲಿ ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಆಂದೋಲನದ ಜಾಗೃತಿ ಜಾಥಾಕ್ಕೆ ಬಿಇಒ ಶೇಖರ್ ಹೊರಪೇಟಿ ಚಾಲನೆ ನೀಡಿದರು. ಮುಖ್ಯ ಶಿಕ್ಷಕ ಭೀಮೇಶ, ಪ್ರಮುಖರಾದ ಸೈಯದ್, ವೀರೇಶ ಮೇಟಿ, ರವಿಚಂದ್ರ, ಹೇಮಾ, ಕಲ್ಲೇಶ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಇಒ ಶೇಖರ್ ಹೊರಪೇಟಿ ಸಲಹೆ
  • ಜಾಗೃತಿ ಜಾಥಾಕ್ಕೆ ಚಾಲನೆ
ಅಳವಂಡಿ: ಶಾಲೆಯ ಸಮಗ್ರ ಅಭಿವೃದ್ಧಿ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ. ಸಮುದಾಯದ ಸಹಯೋಗ ಮತ್ತು ಸಹಕಾರದಿಂದ ಸಾಧ್ಯವಿದೆ ಎಂದು ಬಿಇಒ ಶೇಖರ್ ಹೊರಪೇಟಿ ತಿಳಿಸಿದರು.
ಕೋಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಎಸ್ಡಿಎಂಸಿ ಹಾಗೂ ಕಲಿಕೆ ಟಾಟಾ ಟ್ರಸ್ಟ್ ಸಂಸ್ಥೆಯ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಾಲಾ ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಆಂದೋಲನ ಕಾರ್ಯಕ್ರಮದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮದ ಹಿರಿಯರು, ಎಸ್ಡಿಎಂಸಿ, ಯುವಕರು, ಪಾಲಕರು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಸೈಯದ್, ಸಿಆರ್‌ಪಿ ವೀರೇಶ ಮೇಟಿ, ಎಸ್ಡಿಎಂಸಿ ಅಧ್ಯಕ್ಷ ರವಿಚಂದ್ರ, ಉಪಾಧ್ಯಕ್ಷೆ ಹೇಮಾ, ಸದಸ್ಯರಾದ ಭೀಮನಗೌಡ, ರಮೇಶ ಗೌಡ, ಶೈಲಾ ಕೋರಿ, ಲಕ್ಷ್ಮೀ ಹಿರೇಮಠ, ಚಂದನ ಗೌಡ, ದೇವಪ್ಪ ದೊಡ್ಮನಿ, ಹುಸೇನ್ ಬಾಷಾ, ಉಮಾದೇವಿ, ಪಾರ್ವತಿ, ಶ್ವೇತಾ, ದ್ಯಾಮಣ್ಣ, ಮುತ್ತಣ್ಣ, ಮುಖ್ಯ ಶಿಕ್ಷಕ ಭೀಮೇಶ ಕಲ್ಮನಿ, ಕಲಿಕೆ ಟಾಟಾ ಸಂಸ್ಥೆ ಸಂಚಾಲಕ ಕಲ್ಲೇಶ ತಳವಾರ ಇತರರಿದ್ದರು.
ಅದ್ದೂರಿ ಜಾಥಾ: ಶಾಲಾ ಮಕ್ಕಳು ಕುಂಭ ಮೆರವಣಿಗೆ, ಕೋಲಾಟ, ಡೊಳ್ಳಿನ ಮೇಳ, ಸಿಂಗರಿಸಿದ ಎತ್ತಿನ ಬಂಡಿ, ಟ್ರಾೃಕ್ಟರ್ ಮೂಲಕ ಛದ್ಮ ವೇಷಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು. ಶೈಕ್ಷಣಿಕ ಜಾಗೃತಿಯ ಕರಪತ್ರಗಳನ್ನು ವಿತರಿಸಿ ಸರ್ಕಾರಿ ಶಾಲೆಗಳ ಮಹತ್ವ ಹಾಗೂ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net