ಬಾಲ್ಯದಲ್ಲೇ ಮಾತದಾನದ ಜಾಗೃತಿ ಅಗತ್ಯ

ಅಳವಂಡಿ ಸಮೀಪದ ನೀರಲಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್ ರಚನೆ ಕಾರ್ಯಕ್ರಮ ನಡೆಯಿತು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಸ್.ಬಿ.ಕುರಿ, ಮುಖ್ಯ ಶಿಕ್ಷಕ ರಾಮಚಂದ್ರಗೌಡ ಗೊಂಡಬಾಳ, ಶಿಕ್ಷಕರಾದ ಕೃಷ್ಣಪ್ಪ ತಳಕಲ್, ಹನುಮಂತಪ್ಪ ಕಟಂಬಲಿ, ಅಂದಪ್ಪ ಹಾರೋಗೇರಿ, ಮಲ್ಲಪ್ಪ ಕುರಿ, ಶಕೀಲ್ ಪಾಷಾ, ಆಶಾಭಿ ಹಡಗಲಿ ವಿದ್ಯಾರ್ಥಿಗಳು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶಾಲಾ
  • ಸಂಸತ್
  • ರಚನೆ
ಅಳವಂಡಿ: ಮಕ್ಕಳಿಗೆ ಬಾಲ್ಯದ ದಿನಗಳಲ್ಲೇ ಇಂತಹ ಕಲ್ಪಿತ ಚುನಾವಣೆಗಳ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಕಲ್ಪನೆಯನ್ನು ಪರಿಚಯಿಸುವುದು ಅತ್ಯಂತ ಮುಖ್ಯ ಎಂದು ಕೊಪ್ಪಳ ಅಕ್ಷರ ದಾಸೋಹ ವಿಭಾಗದ ಸಹಾಯಕ ನಿರ್ದೇಶಕ ಎಸ್.ಬಿ.ಕುರಿ ತಿಳಿಸಿದರು.
ಸಮೀಪದ ನೀರಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್ ರಚನೆ ಕಾರ್ಯಕ್ರಮವನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದರು.
ಮತದಾನವು ಮಕ್ಕಳಲ್ಲಿ ಭವಿಷ್ಯದ ಜವಾಬ್ದಾರಿಯುತ ನಾಗರಿಕರಾಗುವ ಗುಣಗಳನ್ನು ಬೆಳೆಸುತ್ತದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಮತಕ್ಕೂ ತನ್ನದೇ ಆದ ಮೌಲ್ಯ ಮತ್ತು ಶಕ್ತಿ ಇದೆ. ಬಾಲ್ಯದಲ್ಲೇ ಇದರ ಬಗ್ಗೆ ಜಾಗೃತಿ ಅಗತ್ಯ. ಇಂದಿನ ಆಧುನಿಕ ಯುಗದಲ್ಲಿ ಚುನಾವಣೆಗಳು ಹೇಗೆ ನಡೆಯುತ್ತವೆ ಎಂಬುದನ್ನು ಮಕ್ಕಳಿಗೆ ಇವಿಎಂ ಬಳಕೆ ಮೂಲಕ ತೋರಿಸಿಕೊಟ್ಟಿರುವುದು ಉತ್ತಮ ಪ್ರಯೋಗ ಎಂದರು. ಮುಖ್ಯ ಶಿಕ್ಷಕ ರಾಮಚಂದ್ರಗೌಡ ಗೊಂಡಬಾಳ ಮಾತನಾಡಿದರು.
ಶಾಲಾ ಸಂಸತ್ ಚುನಾವಣೆಯಲ್ಲಿ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ವಿದ್ಯಾರ್ಥಿ ವಿಜಯಕುಮಾರ ಆನಂದಳ್ಳಿ ಅವರನ್ನು ಅಧಿಕಾರಿಗಳು ಹಾಗೂ ಶಿಕ್ಷಕ ವೃಂದ ಜಂಟಿಯಾಗಿ ಸನ್ಮಾನಿಸಿತು. ಶಿಕ್ಷಕರಾದ ಕೃಷ್ಣಪ್ಪ ತಳಕಲ್, ಹನುಮಂತಪ್ಪ ಕಟಂಬಲಿ, ಅಂದಪ್ಪ ಹಾರೋಗೇರಿ, ಮಲ್ಲಪ್ಪ ಕುರಿ, ಶಕೀಲ್ ಪಾಷಾ, ಆಶಾಭಿ ಹಡಗಲಿ ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net