ಸಾಂಸತಿಕ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ

ಸಾಂಸತಿಕ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಕ.ಕ ಕಲಾವಿದರ ಒಕ್ಕೂಟದ ಜಿಲ್ಲಾ ಸಮಿತಿಯಿಂದ ಡಿಸಿ ಡಾ. ಸುರೇಶ ಬಿ.ಇಟ್ನಾಳಗೆ ಮನವಿ ಸಲ್ಲಿಸಲಾಯಿತು. ಡಿ.ಎಸ್​. ಪೂಜಾರ, ಲಕ್ಷ$್ಮಣ ಪಿರಗಾರ,  ಶರಣು ಶೆಟ್ಟರ್​, ಮುತ್ತಣ್ಣ ವಿಶ್ವಕರ್ಮ, ಮುತ್ತಣ್ಣ ತೊಂಡಿಹಾಳ ಇದ್ದರು.
ಸಾಂಸತಿಕ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಕ.ಕ ಕಲಾವಿದರ ಒಕ್ಕೂಟದ ಜಿಲ್ಲಾ ಸಮಿತಿಯಿಂದ ಡಿಸಿ ಡಾ. ಸುರೇಶ ಬಿ.ಇಟ್ನಾಳಗೆ ಮನವಿ ಸಲ್ಲಿಸಲಾಯಿತು. ಡಿ.ಎಸ್​. ಪೂಜಾರ, ಲಕ್ಷ$್ಮಣ ಪಿರಗಾರ, ಶರಣು ಶೆಟ್ಟರ್​, ಮುತ್ತಣ್ಣ ವಿಶ್ವಕರ್ಮ, ಮುತ್ತಣ್ಣ ತೊಂಡಿಹಾಳ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಲಾವಿದರಿಂದ ಡಿಸಿಗೆ ಮನವಿ
ಕೊಪ್ಪಳ : ಜಿಲ್ಲೆಯ ಸಾಂಸತಿಕ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಜಿಲ್ಲಾ ಸಮಿತಿಯಿಂದ ಡಿಸಿ ಡಾ. ಸುರೇಶ ಬಿ.ಇಟ್ನಾಳ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ವಿವಿಧ ಪ್ರಕಾರದ ಹಾಗೂ ಎಲ್ಲಾ ವಯೋಮಾನದ ಕಲಾವಿದರು ಕಾರ್ಯನಿರ್ವಹಿಸುತ್ತಿದ್ದು, ಮೂಲಸೌಕರ್ಯಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನೆನೆಗುದಿಗೆ ಬಿದ್ದಿರುವ ಜಿಲ್ಲಾ ರಂಗಮಂದಿರವನ್ನು ಶೀಘ್ರ ಉದ್ಘಾಟಿಸಿ ಕಲಾವಿದರ ಬಳಕೆಗೆ ನೀಡಬೇಕು. ಹಿರಿಯ ಕಲಾವಿದರ ಮಾಸಾಶನವನ್ನು ಸಮಯಕ್ಕೆ ಸರಿಯಾಗಿ ವಿತರಿಸುವುದರ ಜತೆಗೆ ಗೌರವಧನವನ್ನು 5 ಸಾವಿರಕ್ಕೆ ಹೆಚ್ಚಿಸಬೇಕು. ಕಲಾವಿದರಿಗೆ ಗುರುತಿನ ಚೀಟಿ ಹಾಗೂ ಉಚಿತ ಬಸ್​ ಪಾಸ್​ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸಾಹಿತ್ಯ ಭವನವನ್ನು ನವೀಕರಿಸಿ ಧ್ವನಿ, ಬೆಳಕು, ಜನರೇಟರ್​, ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಬೇಕು. 2016ರಲ್ಲಿ ಆರಂಭವಾದ ಗಾಂಧಿ ಭವನ ಕಾಮಗಾರಿಯನ್ನು ಪೂರ್ಣಗೊಳಿಸಿ ಉದ್ಘಾಟಿಸಬೇಕು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಮರು ಆರಂಭಿಸಬೇಕು. ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿರುವ ಕನಕಗಿರಿ ಮತ್ತು ಆನೆಗುಂದಿ ಉತ್ಸವಗಳನ್ನು ಶೀಘ್ರ ಆಯೋಜಿಸಿ, ಸ್ಥಳಿಯ ಕಲಾವಿದರು ಹಾಗೂ ಕಲಾತಂಡಗಳಿಗೆ ಆದ್ಯತೆ ನೀಡಬೇಕು. ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಹೋರಾಟದ ರೂಪರೇಷೆ ರೂಪಿಸಲಾಗುವುದು ಎಂದು ಒಕ್ಕೂಟ ಎಚ್ಚರಿಸಿದರು.
ಕ. ಕ. ಕಲಾವಿದರ ಒಕ್ಕೂಟದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಡಿ.ಎಸ್​. ಪೂಜಾರ, ಜಿಲ್ಲಾಧ್ಯಕ್ಷ ಲಕ್ಷ$್ಮಣ ಪಿರಗಾರ ಜಿಲ್ಲಾ ಕಾರ್ಯದರ್ಶಿ ಶರಣು ಶೆಟ್ಟರ್​, ಪದಾಧಿಕಾರಿಗಳಾದ ಮುತ್ತಣ್ಣ ವಿಶ್ವಕರ್ಮ, ಮುತ್ತಣ್ಣ ತೊಂಡಿಹಾಳ, ವೆಂಕಟೇಶ ಹೊಸಮನಿ, ರಾಮಣ್ಣ ಕುಣಿಕೇರಿ, ಸಂಗಪ್ಪ ಕುಂಬಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net