ಕರ್ತೃ ಗದ್ದುಗೆಗೆ ಅಭಿಷೇಕ, ಪುಷ್ಪಾಲಂಕಾರ

ಸಂಕ್ರಾಂತಿ ನಿಮಿತ್ತ ನಗರಗಡ್ಡಿ ಮಠದ ಆವರಣದಲ್ಲಿ ಭಕ್ತರು ಮಹಾ ದಾಸೋಹ ಸವಿದರು.
ಸಂಕ್ರಾಂತಿ ನಿಮಿತ್ತ ನಗರಗಡ್ಡಿ ಮಠದ ಆವರಣದಲ್ಲಿ ಭಕ್ತರು ಮಹಾ ದಾಸೋಹ ಸವಿದರು.
Published on
ಮುನಿರಾಬಾದ್: ಸಮೀಪದ ನಗರಗಡ್ಡಿ ಮಠ ಮತ್ತು ಶಿವಪುರದ ಮಾಕೇರ್ಂಡೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಗುರುವಾರ ಆಚರಿಸಲಾಯಿತು.
ನಗರಗಡ್ಡಿ ಮಠದಲ್ಲಿ ಬೆಳಗಿನ ಜಾವ ಭಕ್ತಾದಿಗಳು ತುಂಗಭದ್ರಾ ನದಿಯಲ್ಲಿ ಭಕ್ತರು ಪವಿತ್ರ ಸ್ನಾನ ಮಾಡಿದರು. ಕರ್ತೃ ಗದ್ದುಗೆಗೆ ವಿಶೇಷ ಅಭಿಷೇಕ, ಪುಷ್ಪಾಲಂಕಾರ ಹಾಗೂ ಮಹಾ ಮಂಗಳಾರತಿಯನ್ನು ನೆರವೇರಿಸಲಾಯಿತು. ಮಠದ ಶ್ರೀಗಳ ಸಾನ್ನಿಧ್ಯದಲ್ಲಿ ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಭಕ್ತರು ಸರದಿಯಲ್ಲಿ ನಿಂತು ಶ್ರೀಗಳ ದರ್ಶನ ಪಡೆದು ಆಶೀರ್ವಾದ ಪಡೆದರು. ಭಕ್ತರಿಗೆ ದಾಸೋಹ ಮಾಡಲಾಯಿತು.
ನಗರಗಡ್ಡಿಯ ಶಾಂತಲಿಂಗೇಶ್ವರ ಸಂಸ್ಥಾನ ಮಠದ ಶಾಂತಲಿಂಗೇಶ್ವರ ಸ್ವಾಮಿಗಳು, ಪದಾಧಿಕಾರಿಗಳು, ಗ್ರಾಮಸ್ಥರು ಇತರರಿದ್ದರು. ಇನ್ನು ಶಿವಪುರದ ಶಿವಪುರದ ಮಾಕೇರ್ಂಡೇಶ್ವರ ದೇವಸ್ಥಾನದಲ್ಲಿ ಬೆಳಗಿನ ಜಾವ ಭಕ್ತಾದಿಗಳು ಆಗಮಿಸಿ ತುಂಗಭದ್ರಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಭಕ್ತರಿಗೆ ಮಹಾದಾಸೋಹದ ವ್ಯವಸ್ಥೆ ಮಾಡಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net