ಬ್ಯಾಂಕ್‌ಗಳಿಂದ ರೈತರಿಗೆ ಕಿರಿಕಿರಿ

ಸಾಲ ವಸೂಲಾತಿ ನೆಪದಲ್ಲಿ ರೈತರ ಭೂಮಿಯನ್ನು ಅವೈಜ್ಞಾನಿಕವಾಗಿ ಹರಾಜು ಹಾಕುತ್ತಿರುವುದನ್ನು ಖಂಡಿಸಿ ರೈತ ಸಂಘದಿಂದ ಕನಕಗಿರಿಯಲ್ಲಿ ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ಭೀಮನಗೌಡ ಗುಡದೂರು, ರೈತ ಮುಖಂಡರಾದ ಹನುಮಂತ ಬಂಡ್ರಾಳ, ಶಿವಕುಮಾರ ಬಡಿಗೇರ ಇತರರಿದ್ದರು.
ಸಾಲ ವಸೂಲಾತಿ ನೆಪದಲ್ಲಿ ರೈತರ ಭೂಮಿಯನ್ನು ಅವೈಜ್ಞಾನಿಕವಾಗಿ ಹರಾಜು ಹಾಕುತ್ತಿರುವುದನ್ನು ಖಂಡಿಸಿ ರೈತ ಸಂಘದಿಂದ ಕನಕಗಿರಿಯಲ್ಲಿ ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ಭೀಮನಗೌಡ ಗುಡದೂರು, ರೈತ ಮುಖಂಡರಾದ ಹನುಮಂತ ಬಂಡ್ರಾಳ, ಶಿವಕುಮಾರ ಬಡಿಗೇರ ಇತರರಿದ್ದರು.
Published on
ಕನಕಗಿರಿ: ಸಾಲ ವಸೂಲಾತಿ ನೆಪದಲ್ಲಿ ರೈತರ ಭೂಮಿಯನ್ನು ಅವೈಜ್ಞಾನಿಕವಾಗಿ ಹರಾಜು ಮಾಡುತ್ತಿರುವ ಹಾಗೂ ರೈತರಿಗೆ ಕೈಕೋಳ ತೊಡಿಸಿ ಜೈಲಿಗೆ ಕಳುಹಿಸಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ಕಾರ್ಯಕರ್ತರು ಸೋಮವಾರ ತಹಸೀಲ್ದಾರ್ ವಿಶ್ವನಾಥ ಮುರುಡಿ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗದ್ದಿ ಮಾತನಾಡಿ, ತಾಲೂಕಿನ ಸೋಮಸಾಗರದ ರೈತರು ಹೈನುಗಾರಿಕೆ, ಕೃಷಿ ಮತ್ತು ಕೃಷಿ ಉಪಕರಣಗಳ ಮೇಲೆ 6 ಲಕ್ಷ ರೂ. ಸಾಲ ಪಡೆದಿದ್ದು, ಸಾಲ ಕಟ್ಟಲೇಬೇಕೆಂದಿರುವ ಗಂಗಾವತಿಯ ಪಿಎಲ್ಡಿ ಬ್ಯಾಂಕ್ ವ್ಯವಸ್ಥಾಪಕರಿಂದ ಕೋರ್ಟ್ ಮೂಲಕ ನೋಟಿಸ್ ನೀಡಿ ರೈತನನ್ನು ಜೈಲಿಗೆ ಕಳುಹಿಸಿದ್ದಾರೆ. ಈ ರೀತಿಯ ಘಟನೆಗಳು, ದೌರ್ಜನ್ಯಗಳು ರೈತರ ಮೇಲೆ ಆಗುತ್ತಿರುವುದನ್ನು ಸರ್ಕಾರ ತಡೆಯಬೇಕು. ಬ್ಯಾಂಕುಗಳು ರೈತರ ಮೇಲೆ ನಡೆಸುವ ಕುತಂತ್ರಗಳು ಅಮಾನವೀಯವಾಗಿದ್ದು, ತಾಲೂಕಿನ 38 ರೈತರಿಗೆ ನ್ಯಾಯಾಲಯ ಮೂಲಕ ವಾರೆಂಟ್ ನೀಡಿ ಅಕ್ರಮವಾಗಿ ಭೂಮಿಯನ್ನು ಹರಾಜು ಮಾಡುತ್ತಿರುವುದು ಮತ್ತು ಜೈಲಿಗೆ ಕಳುಹಿಸಲು ಕಾರಣಿಕರ್ತರಾದವ ವಿರುದ್ಧ ಕಾನೂನು ಕ್ರಮ ಕೈಗೊಂಡು ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಭೀಮನಗೌಡ ಗುಡದೂರು, ರೈತ ಮುಖಂಡರಾದ ಹನುಮಂತ ಬಂಡ್ರಾಳ, ಶಿವಕುಮಾರ ಬಡಿಗೇರ, ವೆಂಕಟೇಶ ಮಲ್ಲಿಗೆವಾಡ, ಸಣ್ಣ ಶೇಖರಪ್ಪ ಗದ್ದಿ, ಹನುಮೇಶ ಪೂಜಾರಿ, ಹನುಮಂತ ಹೊಸ್ಕೇರಿ, ಕನಕಪ್ಪ ಗುಡದೂರು, ವೆಂಕಣ್ಣ ಉಮಳಿ ಕಾಟಾಪೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net