ಅಂಜನಾದ್ರಿ ಬೆಟ್ಟದ ಹುಂಡಿ ಎಣಿಕೆ ಎಣಿಕೆಯಲ್ಲಿ ತೊಡಗಿರುವ ಕಂದಾಯ ಇಲಾಖೆ ಸಿಬ್ಬಂದಿ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಎಣಿಕೆಯಾಗಿ ತಿಂಗಳ ಬಳಿಕ ಮಾಹಿತಿ ಹಂಚಿಕೊಂಡ ತಾಲೂಕು ಆಡಳಿತ
ಗಂಗಾವತಿ: ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದ ಹುಂಡಿಯಲ್ಲಿ 71.77ಲಕ್ಷ ರೂ. ಸಂಗ್ರಹವಾಗಿದ್ದು, ವಿದೇಶಿ ಕರೆನ್ಸಿಗಳು ಲಭ್ಯವಾಗಿದೆ. ಭದ್ರತೆ ದೃಷ್ಟಿಯಿಂದ ತಿಂಗಳಿಗೊಮ್ಮೆ ಹುಂಡಿ ಹಣ ಎಣಿಸಲಾಗುತ್ತಿದ್ದು, ಈ ಬಾರಿ 64 ದಿನಗಳ ನಂತರ ಹುಂಡಿ ತೆರೆಯಲಾಯಿತು.
ಕಂದಾಯ ಇಲಾಖೆ ಸಿಬ್ಬಂದಿ ನೆರವಿನೊಂದಿಗೆ ಇತ್ತೀಚೆಗೆ ಪೊಲೀಸ್ ಬಂದೊಬಸ್ತ್ ಹಾಗೂ ಸಿಸಿ ಕ್ಯಾಮರಾ ಮತ್ತು ವಿಡಿಯೋ ಕಣ್ಗಾವಲಿನಲ್ಲಿ ಹುಂಡಿ ಹಣ ಎಣಿಸಲಾಯಿತು. ಮಾ.26ರಿಂದ ಜೂ.3ರವರೆಗೆ 71,77,460 ರೂ. ಸಂಗ್ರಹವಾಗಿದ್ದು, ನೇಪಾಳ, ಯುನೈಟೆಡ್ ಸ್ಟೇಟ್ ಆ್ ಅಮೆರಿಕ, ಥೈಲ್ಯಾಂಡ್, ಹಾಂಕಾಂಗ್‌ಗೆ ಸಂಬಂಧಿಸಿದ ನೋಟು ಮತ್ತು ನಾಣ್ಯಗಳು ಕಂಡು ಬಂದಿವೆ. ಸಂಗ್ರಹಿತ ಹಣವನ್ನು ಸಣಾಪುರದ ಕರ್ನಾಟಕ ಗ್ರಾಮೀಣ ಬ್ಯಾಂಕ್ (ಕೆಜಿಬಿ)ಯಲ್ಲಿ ಜಮೆ ಮಾಡಲಾಗಿದೆ.
ಶಿರಸ್ತೇದಾರರಾದ ಪ್ರಕಾಶ ನಾಯಕ, ಕೃಷ್ಣವೇಣಿ, ಸಿಬ್ಬಂದಿ ಸುಪ್ರಿಯಾ, ನವಾಜ್, ಯಶವಂತ, ಶರಣಪ್ಪ, ರಾಜೇಶ, ಬ್ಯಾಂಕ್ ಸಿಬ್ಬಂದಿ ನವೀನ್ ಕುಮಾರ, ಹನುಮೇಶ, ಪೊಲೀಸ್ ಪೇದೆ ವೆಂಕಟೇಶ ಸೇರಿ ದೇವಾಲಯ ಸಿಬ್ಬಂದಿ ಇದ್ದರು. ಕಳೆದ ಮಾ.26ರ ಹುಂಡಿಯಲ್ಲಿ 31.30 ಲಕ್ಷ ರೂ. ಸಂಗ್ರಹವಾಗಿತ್ತು.
ಈ ಬಗ್ಗೆ ತಹಸೀಲ್ದಾರ್ ಯು.ವಸಂತಕುಮಾರಿ ಪ್ರತಿಕ್ರಿಯಿಸಿ, ಜೂ.3ರಂದು ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದರೂ, ಎಣಿಕೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಸಿಬ್ಬಂದಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರಿಂದ ತಡವಾಗಿ ಮಾಹಿತಿ ನೀಡಲಾಗಿದೆ. ಎಣಿಕೆ ಕಾರ್ಯ ಪಾರದರ್ಶಕತೆ ಮತ್ತು ವಿಡಿಯೋ ಕಣ್ಗಾವಲಿನಲ್ಲಿ ನಡೆದಿದೆ ಎಂದರು.