ಎಪ್ರೀಲ್ ಮತ್ತು ಮೇ ತಿಂಗಳಿನಲ್ಲಿ ಹೆಚ್ಚಿನ ಪ್ರಮಾಣದ ಬಿಸಿಲಿರುವುದರಿಂದ. ಅಂಜನಾದ್ರಿ ಬೆಟ್ಟದ ಸುತ್ತಲು ಅನೇಕ ಗುಡ್ಡಗಳಿದ್ದು ಬೇಸಿಗೆಯಲ್ಲಿ ಬಿಸಿಲಿನ ತಾಪ ಮತ್ತಷ್ಟು ಹೆಚ್ಚುತ್ತದೆ. ಬಿಸಿಲಿನಲ್ಲಿ ಬೆಟ್ಟದ ಸುಮಾರು 575 ಮೆಟ್ಟಿಲುಗಳನ್ನೇರುವಾಗ ಉಸಿರಾಟದ ತೊಂದರೆಯಾಗಿ ಕುಸಿದು ಬೀಳುವ ಸಾದ್ಯತೆ ಹೆಚ್ಚು. ಈ ಎರಡು ತಿಂಗಳು ಬೆಟ್ಟಕ್ಕೆ ಬರುವ ಭಕ್ತರಿಗೆ ಬೆಳಗ್ಗೆ 11 ರಿಂದ ಸಂಜೆ 4 ಗಂಟೆಯ ಅವಧಿಯಲ್ಲಿ ಅಂಜನಾದ್ರಿ ಆಂಜನೇಯಸ್ವಾಮಿ ದರ್ಶನ ಪಡೆಯಲು ನಿಷೇಧ ಮಾಡುವಂತೆ ಜಿಲ್ಲಾ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಗಳು ಕೋರಿದ್ದು. ಅದರಂತೆ, ದರ್ಶನದ ವೇಳೆಯನ್ನು ಭಕ್ತಾದಿಗಳ ಹಿತದೃಷ್ಟಿಯಿಂದ ಬೆಳಗ್ಗೆ 6 ರಿಂದ 11 ಗಂಟೆಯವರೆಗೆ ಮತ್ತು ಸಾಯಂಕಾಲ 4 ರಿಂದ 6 ಗಂಟೆಯವರೆಗೆ ಮಾತ್ರ ದರ್ಶನಕ್ಕೆ ಸಮಯವನ್ನು ನಿಗಧಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.