ಉದ್ಯೋಗಕಷ್ಟೇ ಸೀಮಿತವಾದ ಶಿಕ್ಷಣ ವ್ಯವಸ್ಥೆ

ಕನಕಗಿರಿಯ ಶ್ರೀ ರುದ್ರಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಘದ ಶಾಲೆಯಲ್ಲಿ ಭಾರತೀಯ ಸಂಸ್ಕೃತಿ ಅರಿವು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಬಸವರಾಜ ಪಾಟೀಲ್ ಸೇಡಂ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಪದಾಧಿಕಾರಿಗಳಾದ ಶೇಖರಗೌಡ ಪಾಟೀಲ್, ಡಾ.ಬಸಯ್ಯಸ್ವಾಮಿ, ವಾಗೇಶ ಹಿರೇಮಠ, ಕೆ.ಬಸಲಿಂಗಯ್ಯಸ್ವಾಮಿ, ಪ್ರಶಾಂತ ಪ್ರಭುಶೆಟ್ಟರ್, ಶರಣಪ್ಪ ಭತ್ತದ್ ಇತರರಿದ್ದರು.
ಕನಕಗಿರಿಯ ಶ್ರೀ ರುದ್ರಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಘದ ಶಾಲೆಯಲ್ಲಿ ಭಾರತೀಯ ಸಂಸ್ಕೃತಿ ಅರಿವು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಬಸವರಾಜ ಪಾಟೀಲ್ ಸೇಡಂ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಪದಾಧಿಕಾರಿಗಳಾದ ಶೇಖರಗೌಡ ಪಾಟೀಲ್, ಡಾ.ಬಸಯ್ಯಸ್ವಾಮಿ, ವಾಗೇಶ ಹಿರೇಮಠ, ಕೆ.ಬಸಲಿಂಗಯ್ಯಸ್ವಾಮಿ, ಪ್ರಶಾಂತ ಪ್ರಭುಶೆಟ್ಟರ್, ಶರಣಪ್ಪ ಭತ್ತದ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಹೇಳಿಕೆ
  • ವಿಶೇಷ ಉಪನ್ಯಾಸ ಕಾರ್ಯಕ್ರಮ
ಕನಕಗಿರಿ: ಮನುಷ್ಯ ದೊಡ್ಡವನಾಗಲು ಶಕ್ತಿ, ಬುದ್ಧಿವಂತಿಕೆಗಿಂತ ವಿವೇಕ ಪ್ರಮುಖವಾಗಿದೆ ಎಂದು ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಹಾಗೂ ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಹೇಳಿದರು.
ಶ್ರೀ ರುದ್ರಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಘದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭಾರತೀಯ ಸಂಸ್ಕೃತಿ ಅರಿವು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯ ಸಮಾಜಕ್ಕೆ ಒಳಿತು ಮಾಡಿದರೆ ಮಾತ್ರ ವಿವೇಕದ ಮಹತ್ವ ತಿಳಿಯುತ್ತದೆ. ಮುಂಚೆ ಜ್ಞಾನಕ್ಕಾಗಿ ಶಿಕ್ಷಣ ಇರುತ್ತಿತ್ತು. ಈಗ ಉದ್ಯೋಗಕ್ಕೆ ಮಾತ್ರ ಸೀಮಿತವಾಗಿದೆ.
ಶಿಕ್ಷಣದ ವಿಚಾರದಲ್ಲಿ ಮನುಷ್ಯ ಹೇಳುವುದಕ್ಕೂ ನಡೆದುಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಹಿಂದೆ ಕೃಷಿಗೆ ಮೊದಲ ಪ್ರಾಧಾನ್ಯ, ವ್ಯಾಪಾರಕ್ಕೆ ಮಧ್ಯಮ ಸ್ಥಾನ ನೀಡಿ ನೌಕರಿಯನ್ನು ಪಂಜರದ ಗಿಳಿ, ಗುಲಾಮಗಿರಿ ಎಂದು ಕನಿಷ್ಠ ಸ್ಥಾನ ನೀಡಿದ್ದರು. ಕಾಲ ಬದಲಾಗಿದ್ದು, ನೌಕರಿಗಾಗಿ ಶಿಕ್ಷಣ ಪಡೆಯುವ ಪ್ರಯತ್ನ ನಡೆದಿದೆ. ಆಹಾರ ನೀಡುವ ಕೃಷಿಯನ್ನು ಮರೆಯುತ್ತಿದ್ದಾರೆ. ತಿಂಗಳಿನ ಮೊದಲ ದಿನ ಇನ್ನೊಬ್ಬರ ಬಳಿ ಸಂಬಳಕ್ಕಾಗಿ ಕೈ ಚಾಚುವ ಬದಲು ಗೌರವಯುತ ಜೀವನ ಸಾಗಿಸುವ ಕೃಷಿಗೆ ಮಹತ್ವ ನೀಡಬೇಕು ಎಂದು ಹೇಳಿದರು.
ವಿಕಾಸ ಅಕಾಡೆಮಿ ಸಂಚಾಲಕ ವೀರೇಶ ಮ್ಯಾಗೇರಿ ಮಾತನಾಡಿ, ಶಿಕ್ಷಣದಿಂದ ಮಾತ್ರ ಸಾಧನೆ ಸಾಧ್ಯ ಎಂದು ಅರಿತ ಬಸವರಾಜ ಪಾಟೀಲ್ ಸೇಡಂ ಅವರು ಕೆಲ ದಶಕಗಳ ಹಿಂದೆಯೇ ಶಿಕ್ಷಣ ಸಂಸ್ಥೆ ಆರಂಭಿಸಿ ಸಂಸ್ಕಾರಭರಿತ ಶಿಕ್ಷಣ ನೀಡಲು ಶ್ರಮಿಸುತ್ತಿದ್ದಾರೆ ಎಂದರು.
ಡಾ.ಚನ್ನಮಲ್ಲ ಸ್ವಾಮೀಜಿ, ಸಂಸ್ಥೆಯ ಪದಾಧಿಕಾರಿಗಳಾದ ಶೇಖರಗೌಡ ಪಾಟೀಲ್, ಡಾ.ಬಸಯ್ಯಸ್ವಾಮಿ, ವಾಗೇಶ ಹಿರೇಮಠ, ಕೆ.ಬಸಲಿಂಗಯ್ಯಸ್ವಾಮಿ, ಪ್ರಶಾಂತ ಪ್ರಭುಶೆಟ್ಟರ್, ಶರಣಪ್ಪ ಭತ್ತದ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net