ಯಲಬುರ್ಗಾ ತಾಪಂ ಕಚೇರಿಯಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು. ಸಿಬ್ಬಂದಿ ಬಸವರಾಜ ಹಳ್ಳಿ, ಬಸವರಾಜ ಮಾಲಿಪಾಟೀಲ್, ಶರಣಪ್ಪ ಇಂಡಿ, ಪ್ರಶಾಂತ ಬಡಿಗೇರ್, ಉಮೇಶ, ಮಂಜುನಾಥ ನಿಂಗೋಜಿ ಇದ್ದರು.
Published on:
ಯಲಬುರ್ಗಾ: ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ತಮ್ಮ ಬದುಕನ್ನು ತಪಸ್ಸನ್ನಾಗಿಸಿ, ಕಾಯಕವನ್ನೇ ಪೂಜೆಯನ್ನಾಗಿಸಿದ್ದರು ಎಂದು ತಾಪಂ ಕಚೇರಿ ನೌಕರ ಬಸವರಾಜ ಹಳ್ಳಿ ಹೇಳಿದರು.
ಪಟ್ಟಣದ ತಾಪಂ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಬದುಕು ಎಲ್ಲ ಮಹಿಳೆಯರಿಗೆ ಆದರ್ಶ. ಮಲ್ಲಮ್ಮ ದಾರ್ಶನಿಕರ ವಚನಗಳಂತೆ ಜೀವಿಸಿದ ಆದರ್ಶ ನಾರಿಯಾಗಿದ್ದಾರೆ.
ಅವರ ಬದುಕೇ ಉಕ್ತಿಗಳು. ಯಾವುದೇ ಸಾಹಿತ್ಯ ಅಥವಾ ಗ್ರಂಥಗಳಿಂದ ಜಗತ್ತನ್ನು ವ್ಯಾಪಿಸಲಿಲ್ಲ. ಬದಲಿಗೆ ಜನಪದರ ಲಾವಣಿ, ಹಂತಿ ಪದಗಳು, ಹಾಡುಗಳ ಮೂಲಕ ಜೀವಂತವಾಗಿದ್ದಾರೆ ಎಂದರು.
ತಾಪಂ ಸಿಬ್ಬಂದಿ ಬಸವರಾಜ ಮಾಲಿಪಾಟೀಲ್, ಶರಣಪ್ಪ ಇಂಡಿ, ಪ್ರಶಾಂತ ಬಡಿಗೇರ್, ಉಮೇಶ, ಮಂಜುನಾಥ ನಿಂಗೋಜಿ ಇತರರಿದ್ದರು.