ಕೊಪ್ಪಳದಲ್ಲಿ ಅಕ್ಕಮಹಾದೇವಿ ಜಯಂತಿ

ಕೊಪ್ಪಳದ ಮಹಿಳಾ ಪದವಿ ಕಾಲೇಜಿನಲ್ಲಿ ಗುರುವಾರ ಅಕ್ಕಮಹಾದೇವಿ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ಗಣಪತಿ ಲಮಾಣಿ, ಪ್ರಾಧ್ಯಾಪಕರಾದ ನಾಗರತ್ನ ತಮ್ಮಿನಾಳ, ವಿಠೋಬ ಎಸ್​., ಡಾ.ಮಲ್ಲಿಕಾರ್ಜುನ, ಡಾ.ಪ್ರದಿಪ್​ ಕುಮಾರ್​, ಶುಭ, ಸುಮಿತ್ರಾ, ಸುಮಯ್ಯ ಇದ್ದರು.
ಕೊಪ್ಪಳದ ಮಹಿಳಾ ಪದವಿ ಕಾಲೇಜಿನಲ್ಲಿ ಗುರುವಾರ ಅಕ್ಕಮಹಾದೇವಿ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ಗಣಪತಿ ಲಮಾಣಿ, ಪ್ರಾಧ್ಯಾಪಕರಾದ ನಾಗರತ್ನ ತಮ್ಮಿನಾಳ, ವಿಠೋಬ ಎಸ್​., ಡಾ.ಮಲ್ಲಿಕಾರ್ಜುನ, ಡಾ.ಪ್ರದಿಪ್​ ಕುಮಾರ್​, ಶುಭ, ಸುಮಿತ್ರಾ, ಸುಮಯ್ಯ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಾತಿರಹಿತ ಸಮಾಜ ಶರಣರ ಕನಸು
  • ಪ್ರಾಚಾರ್ಯ ಗಣಪತಿ ಲಮಾಣಿ ಹೇಳಿಕೆ
ಕೊಪ್ಪಳ: ಜಾತಿ, ವರ್ಗ ರಹಿತ ಸಮಾಜ ನಿರ್ಮಾಣ ಶರಣರ ಕನಸಾಗಿತ್ತು. ಶಿವಶರಣೆ ಅಕ್ಕಮಹಾದೇವಿ ಈ ನಿಟ್ಟಿನಲ್ಲಿ ಶ್ರಮಿಸಿದರು ಎಂದು ನಗರದ ಮಹಿಳಾ ಪ್ರಥಮ ದರ್ಜೆ ಪದವಿ ಕಾಲೇಜು ಪ್ರಾಚಾರ್ಯ ಡಾ.ಗಣಪತಿ ಲಮಾಣಿ ಹೇಳಿದರು.
ನಗರದ ಮಹಿಳಾ ಪದವಿ ಕಾಲೇಜು ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತಿಯಲ್ಲಿ ಮಾತನಾಡಿದರು.
ಅಕ್ಕ ಮಹಾದೇವಿ 12ನೇ ಶತಮಾನದ ವಚನಕಾರರಲ್ಲಿ ಪ್ರಮುಖರು. ವಚನಗಳ ಮೂಲಕ ಸಮಾಜದಲ್ಲಿನ ಅಸಮಾನತೆ ನಿವಾರಣೆಗೆ ಶ್ರಮಿಸಿದರು. ವಚನಗಳಲ್ಲಿ ಜೀವನ ಸಾರ ತಿಳಿಸಿದರು.
ಪ್ರಾಧ್ಯಾಪಕ ಡಾ.ಗವಿಸಿದ್ದಪ್ಪ ಮುತ್ತಾಳ ಮಾತನಾಡಿ, ಅಕ್ಕಮಹಾದೇವಿ ಶಿವಮೊಗ್ಗ ಜಿಲ್ಲೆ, ಶಿಕಾರಿಪುರದ ಉಡುತಡಿ ಗ್ರಾಮದಲ್ಲಿ ಜನಿಸಿದರು. ಕ್ರಿ.ಶ. 1130 ರಿಂದ 1160 ರಲ್ಲಿ ಬದುಕಿದ್ದರು. ಲೌಕಿಕತೆ ಬಿಟ್ಟು ಅಲೌಕಿಕತೆ ಕಡೆಗೆ ಗಮನ ಕೊಟ್ಟರು. ನಾವೆಲ್ಲರೂ ಅಕ್ಕ ಮಹಾದೇವಿ ಅವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಪ್ರಾಧ್ಯಾಪಕರಾದ ಡಾ.ಹುಲಿಗೆಮ್ಮ, ಡಾ.ನರಸಿಂಹ ಮಾತನಾಡಿದರು. ಪ್ರಾಧ್ಯಾಪಕರಾದ ನಾಗರತ್ನ ತಮ್ಮಿನಾಳ, ವಿಠೋಬ ಎಸ್​., ಡಾ.ಮಲ್ಲಿಕಾರ್ಜುನ, ಡಾ.ಪ್ರದಿಪ್​ ಕುಮಾರ್​, ಶುಭ, ಸುಮಿತ್ರಾ, ಸುಮಯ್ಯ, ಅಲ್ಲಭಕ್ಷ, ಹನುಮಪ್ಪ, ಶಿವಪ್ರಸಾದ್​ ಹಾದಿಮನಿ, ಅನಿಲ ಪವಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net