ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣದಿಂದ ಶುಕ್ರವಾರ ವಿಮಾನಯಾನ ಮೂಲಕ ಪ್ರವಾಸ ತೆರಳಿದ ಕೊಪ್ಪಳ ತಾಲೂಕಿನ ಬಹಾದ್ದೂರ್ ಬಂಡಿ ಸರ್ಕಾರಿ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಂಸದ ರಾಜಶೇಖರ ಹಿಟ್ನಾಳ ಹೇಳಿಕೆ
ಕೊಪ್ಪಳ: ಸರ್ಕಾರಿ ಶಾಲೆ ಮಕ್ಕಳನ್ನು ವಿಮಾನದಲ್ಲಿ ಕರೆದೊಯ್ದು ಪ್ರವಾಸ ಮಾಡಿಸುತ್ತಿರುವುದು ಇತರರಿಗೆ ಪ್ರೇರಣೆಯಾಗಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಡಳಿತ ಭವನ ಆವರಣದಲ್ಲಿ ಶುಕ್ರವಾರ ಪ್ರವಾಸ ಹೊರಟ ಮಕ್ಕಳಿಗೆ ಶುಭ ಕೋರಿ ಮಾತನಾಡಿದರು.
ಬಹಾದ್ದೂರ್ ಬಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಬೀರಪ್ಪ ಅಂಡಗಿ 24 ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ವಿಮಾನದಲ್ಲಿ ಕರೆದೊಯ್ಯುತ್ತಿದ್ದಾರೆ. ಗ್ರಾಮೀಣ ಭಾಗದ ಮಕ್ಕಳಿಗೆ ವಿಮಾನ ಎಂದರೆ ಅದ್ಭುತ. ಅಂಥ ಅವಕಾಶ ಮಾಡಿಕೊಟ್ಟಿದ್ದು ಶ್ಲಾನೀಯ. ಉಳ್ಳವರು ಇಂಥ ಸಾಮಾಜಿಕ ಕಾರ್ಯಕ್ಕೆ ಮುಂದಾಗಬೇಕು. ಇಂಥ ಚಟುವಟಿಕೆಗಳಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಲಿದೆ ಎಂದರು.
ಶಿಕ್ಷಕ ಬೀರಪ್ಪ ಅಂಡಗಿ ಮಾತನಾಡಿ, ರೈತರು ದೇಶಕ್ಕೆ ಅನ್ನ ನೀಡಿದರೆ ಶಿಕ್ಷಕರಿಗೆ ಅನ್ನ ನೀಡುವವರು ವಿದ್ಯಾರ್ಥಿಗಳು. ಹಾಗಾಗಿ ಅವರಿಗೆ ಏನಾದರೂ ಸೇವೆ ಮಾಡಬೇಕೆಂಬ ಮಹದಾಸೆಯಿಂದ ಸ್ವಂತ ಹಣದಿಂದ ವಿಮಾನ ಪ್ರಯಾಣ ಹಮ್ಮಿಕೊಂಡಿದ್ದೇನೆ. ವಿಮಾನದ ಮೂಲಕ ಬೆಂಗಳೂರಿಗೆ ಕರೆದೊಯ್ದು ಅಲ್ಲಿ ಎರಡು ದಿನಗಳ ಕಾಲ ವಿಧಾನಸೌಧ, ಹೈಕೋರ್ಟ್, ಲಾಲ್ ಬಾಗ್, ನೆಹರು ತಾರಾಲಯ ಇನ್ನಿತರ ಪ್ರೇಕ್ಷಣಿಯ ಸ್ಥಳ ತೋರಿಸಲಾಗುವುದು ಎಂದು ಮಾಹಿತಿ ನೀಡಿದರು.
ತಹಸೀಲ್ದಾರ್ ವಿಠ್ಠಲ್ ಚೌಗಲಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ್, ಬಿಇಒ ಹನುಮಂತಪ್ಪ, ಡಿವೈಎಸ್ಪಿ ಮುತ್ತಣ್ಣ ಸರವಗೋಳ, ಬಹಾದ್ದೂರ್ ಬಂಡಿ ಗ್ರಾಪಂ ಅಧ್ಯಕ್ಷ ಯೋಗಾನಂದ ಲೇಬಗೇರಿ, ಪಿಎಸ್ಐ ರೇವಣ್ಣ ಗುರಿಕಾರ, ಸಿಆರ್ಪಿ ಹನುಮಂತಪ್ಪ ಕುರಿ ಇತರರಿದ್ದರು.