ಕೆಪಿಎಸ್​ಸಿ ಭ್ರಷ್ಟಾಚಾರ ಖಂಡಿಸಿ

ಕೆಪಿಎಸ್​ಸಿ ಭ್ರಷ್ಟಾಚಾರ ವಿರೋಧಿಸಿ ಕೊಪ್ಪಳದ ಅಶೋಕ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು. ಸಂಘಟನೆ ಮುಖಂಡ ಶರಣು ಪಾಟೀಲ್​, ಸದಸ್ಯರಾದ ಸುಭಾನ್​ ನೀರಲಗಿ, ಶಿವಮೂರ್ತಿ ವದಗನಾಳ್​, ಹೊನ್ನೂರ್​ ಹನಕುಂಟಿ ಇದ್ದರು.
ಕೆಪಿಎಸ್​ಸಿ ಭ್ರಷ್ಟಾಚಾರ ವಿರೋಧಿಸಿ ಕೊಪ್ಪಳದ ಅಶೋಕ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು. ಸಂಘಟನೆ ಮುಖಂಡ ಶರಣು ಪಾಟೀಲ್​, ಸದಸ್ಯರಾದ ಸುಭಾನ್​ ನೀರಲಗಿ, ಶಿವಮೂರ್ತಿ ವದಗನಾಳ್​, ಹೊನ್ನೂರ್​ ಹನಕುಂಟಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಐಡಿವೈಓ ನಿಂದ ಪ್ರತಿಭಟನೆ

ಕೊಪ್ಪಳ : ಕೆಪಿಎಸ್​ಸಿಯಲ್ಲಿನ ಭ್ರಷ್ಟಾಚಾರ, ನೇಮಕಾತಿ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ಕ್ರಮ ಕೈಗೊಂಡು ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಹಾಗೂ ಆಲ್​ ಇಂಡಿಯಾ ಡೆಮಾಕ್ರೆಟಿಕ್​ ಯೂತ್​ ಆರ್ಗನೈಸೇಷನ್​ ಜಿಲ್ಲಾ ಸಮಿತಿಯಿಂದ ಗುರುವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಂಘಟನೆ ಮುಖಂಡ ಶರಣು ಪಾಟೀಲ್​ ಮಾತನಾಡಿ, ಕೆಪಿಎಸ್​ಸಿಯಲ್ಲಿ ಪದೇ ಪದೇ ನಡೆಯುತ್ತಿರುವ ಅಕ್ರಮಗಳು, ನೇಮಕಾತಿ ಅವ್ಯವಹಾರಗಳು ಹಾಗೂ ವಿಳಂಬಗಳಿಂದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಭವಿಷ್ಯ ಸಂಕಷ್ಟಕ್ಕೀಡಾಗಿದೆ ಎಂದು ಆರೋಪಿಸಿ. ಭ್ರಷ್ಟಾಚಾರದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಜರುಗಿಸಿ, ಪಿ.ಸಿ. ಹೋಟಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತಂದು ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕ ಹಾಗೂ ತಂತ್ರಜ್ಞಾನ ಆಧಾರಿತವಾಗಿ ರೂಪಿಸಬೇಕು ಎಂದು ಆಗ್ರಹಿಸಿದರು.
ಕೆಪಿಎಸ್​ಸಿಯಲ್ಲಿನ ಭ್ರಷ್ಟಾಚಾರದ ಆರೋಪಗಳ ಕುರಿತು ನ್ಯಾಯಾಂಗ ತನಿಖೆ ನಡೆಸುವುದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವುದು, ವಿಷಯ ತಜ್ಞರನ್ನು ಅಧ್ಯಕ್ಷರು ಹಾಗೂ ಸದಸ್ಯರ ಆಯ್ಕೆ ಪ್ರಕ್ರಿಯೆಯಲ್ಲಿ ಪರಿಗಣಿಸುವುದು, ಖಾಲಿ ಹುದ್ದೆಗಳ ಶೀಘ್ರ ಭರ್ತಿ ಮಾಡುವುದು ಹಾಗೂ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಮತ್ತು ಭೂಮಾಪಕರ ನೇಮಕಾತಿಗೆ ಕೆಪಿಎಸ್​ಸಿ ಸಂಗ್ರಹಿಸಿದ ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳಿಗೆ ಮರುಪಾವತಿಸಬೇಕು ಎಂದು ಒತ್ತಾಯಿಸಿ ಡಿಸಿ ಕಚೇರಿ ಚುನಾವಣಾ ತಹಶೀಲ್ದಾರ್​ ರವಿಕುಮಾರ್​ ವಸ್ತ್ರದ್​ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಸಂಘಟನೆ ಸದಸ್ಯರಾದ ಸುಭಾನ್​ ನೀರಲಗಿ, ಶಿವಮೂರ್ತಿ ವದಗನಾಳ್​, ಹೊನ್ನೂರ್​ ಹನಕುಂಟಿ, ಸ್ಪರ್ಧಾರ್ಥಿಗಳಾದ ಫಯಾಜ್​ ಮೆಹಬೂಬ್​ ನಗರ್​, ಶ್ರೀಧರ್​ ಮಾಲಿಪಾಟೀಲ್​, ಬಸವರಾಜ್​, ಕಿರಣ್​, ಅಶೋಕ್​ ಬಿ ಹೊಸಳ್ಳಿ, ಮಾರುತಿ, ಹೊನ್ನೂರಸಾಬ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net