ಸತ್ವ ಹೀನವಾಗುತಿದೆ ಕೃಷಿ ಭೂಮಿ

ಸತ್ವ ಹೀನವಾಗುತಿದೆ ಕೃಷಿ ಭೂಮಿ ಫೋಟೋ
ಸತ್ವ ಹೀನವಾಗುತಿದೆ ಕೃಷಿ ಭೂಮಿ ಫೋಟೋ
Published on

ಪ್ರಮುಖ ಮುಖ್ಯಾಂಶಗಳು

  • ಏರುತ್ತಿದೆ ಸವಳು-ಜವಳು ಪ್ರಮಾಣ
  • ರಾಯಚೂರು-ವಿಜಯನಗರದಲ್ಲಿ ಅಧಿಕ
ಕೊಪ್ಪಳ : ಒಂದೆಡೆ ಬರ ಛಾಯೆ ಅನ್ನದಾತನರನ್ನು ಕಂಗೆಡಿಸಿದೆ. ಮತ್ತೊಂದೆಡೆ ಕೊಪ್ಪಳ ಸೇರಿ ರಾಯಚೂರು, ವಿಜಯನಗರ ಜಿಲ್ಲೆಗಳಲ್ಲಿ ಸವಳು&ಜವಳು ಭೂಮಿ ಹೆಚ್ಚುತ್ತಿರುವುದು ಕೃಷಿ ಬೆಳವಣಿಗೆ ಮೇಲೆ ಕರಿ ನೆರಳು ಬೀಳುವಂತೆ ಮಾಡಿದೆ.
ಸಜಹವಾಗಿ ನೀರಾವರಿ ಪ್ರದೇಶಗಳಲ್ಲಿ ಅತಿಯಾದ ನೀರಿನ ಬಳಕೆ ಸವಳು ಪ್ರಮಾಣ ಹೆಚ್ಚಿಸುತ್ತದೆ. ಆದರೆ, ಒಣ ಬೇಸಾಯ ಆಧಾರಿತ ಪ್ರದೇಶಗಳಲ್ಲೂ ಈ ಪ್ರಮಾಣ ಅಧಿಕವಾಗುತ್ತಿರುವುದು ಕೃಷಿ ವಲಯವನ್ನು ಕಂಗೆಡಿಸುತ್ತಿದೆ. ಕೃಷಿ ಚಟುವಟಿಕೆಗಳ ಬೆಲೆ ಹೆಚ್ಚಳ, ರಸಗೊಬ್ಬರ, ಬಿತ್ತನೆ ಬೀಜ ಬೆಲೆಯೂ ಗಗನಕ್ಕೇರಿದೆ. ಕೃಷಿ ಕಾಯಕ ದುಬಾರಿ ಎಂಬಂತಾಗಿದೆ. ಕೃಷಿ ವೆಚ್ಚ ಏರಿಕೆ ಕ್ರಮದಲ್ಲಿದ್ದರೆ, ಬೆಳೆಗಳಿಗೆ ಸಿಗುವ ದರ ಇಳಿಕೆಯಾಗುತ್ತಿದೆ. ಇದೆಲ್ಲದರ ನಡುವೆ ಈ ವರ್ಷ ಎಲ್​ ನಿನೋ ಪ್ರಭಾವ ಮುಂಗಾರು ಮಳೆ ನುಂಗಿದೆ. ಜೂನ್​ ತಿಂಗಳಿಡೀ ಮಳೆಯ ದರ್ಶನವೇ ಇಲ್ಲದಂತಾಗಿದ್ದು, ಬರಗಾಲದ ಹೊಸ್ತಿಲಿಗೆ ತಂದು ನಿಲ್ಲಿಸಿದೆ.
ಇದೀಗ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ನಡೆಸಿದ ಅಧ್ಯಯನ ವರದಿಯಲ್ಲಿ ರಾಜ್ಯದಾದ್ಯಂತ 77,646.6 ಹೆಕ್ಟೇರ್​ ಪ್ರದೇಶ ಸವಳು&ಜವಳಾಗಿ ಪರಿವರ್ತನೆಯಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಅದರಲ್ಲೂ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಈ ಪ್ರಮಾಣ ಅಧಿಕಗೊಂಡಿದೆ. ಮೊದಲೇ ಅಭಿವೃದ್ಧಿ ಸೂಚ್ಯಂಕದಲ್ಲಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಜಿಲ್ಲೆಗಳು ಹಿಂದುಳಿದಿವೆ. ಅಭಿವೃದ್ಧಿ ವೇಗ ಬಹುತೇಕ ಕೃಷಿಯನ್ನೇ ಅವಲಂಬಿಸಿದ್ದು, ಅಪಾರ ಪ್ರಮಾಣದ ಭೂಮಿ ಸತ್ವ ಕಳೆದುಕೊಳ್ಳುತ್ತಿರುವುದು ಕೃಷಿ ರಂಗ ಸಾಗುತ್ತಿರುವ ಹಾದಿ ಒರೆಗೆ ಹಚ್ಚುವಂತೆ ಮಾಡಿದೆ.
ಒಟ್ಟು ಸವಳು ಭೂಮಿ ಪೈಕಿ 56,621.34 ಹೆಕ್ಟೇರ್​ ಪ್ರದೇಶ ಉಕ, ಕಕದ 13 ಜಿಲ್ಲೆಗಳಲ್ಲಿದೆ ಎಂಬುದೇ ಆತಂಕಕಾರಿ. ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಉತ್ತರ ಕನ್ನಡ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿನ ಕೃಷಿ ಭೂಮಿ ಹಂತ ಹಂತವಾಗಿ ಸವಳಾಗಿ ಪರಿವರ್ತನೆಯಾಗುತ್ತಿದೆ. ಅದರಲ್ಲೂ ರಾಯಚೂರು ಜಿಲ್ಲೆಯಲ್ಲಿ ಅತಿ ಹೆಚ್ಚು 22,463.38 ಹೆಕ್ಟೇರ್​ ಒಣ ಬೇಸಾಯ ಪ್ರದೇಶ ಸವಳು&ಜವಳಾಗಿ ಪರಿವರ್ತನೆಯಾಗಿದೆ. ವಿಜಯನಗರದಲ್ಲಿ 17,750 ಹೆಕ್ಟೇರ್​ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ 7,488.57 ಹೆಕ್ಟೇರ್​ ಕೃಷಿ ಭೂಮಿಯಲ್ಲಿ ಅಧಿಕ ಲವಣಾಂಶ ಕಂಡು ಬಂದಿದ್ದು, ಕೃಷಿ ಕಾಯಕ ಸವಾಲಾಗಿದೆ.

ಕಾಟಾಚಾರದ ಉಪಚಾರ ಕ್ರಮ

ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸವಳು&ಜವಳು ಭೂಮಿ ಉಪಚಾರ ಯೋಜನೆ ಜಾರಿ ಇವೆ. ರಾಷ್ಟ್ರೀಯ ಕೃಷಿ ವಿಕಾಸ್​ ಯೋಜನೆಯಡಿ ಸಮಸ್ಯಾತ್ಮಕ ಮಣ್ಣು ಸುಧಾರಣೆ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. 2016ರಿಂದ ಈವರೆಗೆ ರಾಜ್ಯಕ್ಕೆ 31.43 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಬಸಿಗಾಲುವೆ ನಿರ್ಮಿಸಿ 4,208.19 ಹೆಕ್ಟೇರ್​ ಪ್ರದೇಶವನ್ನು ಸುಧಾರಿಸಲಾಗಿದೆ. 2025&26ರಲ್ಲಿ 4.18 ಕೋಟಿ ರೂ. ಅನುದಾನ ನಿರೀಸಲಾಗಿದೆ. ರಾಜ್ಯ ಸರ್ಕಾರದಿಂದ ನರೇಗಾ ಯೋಜನೆಯಡಿ ಸವಳು&ಜವಳು ಪ್ರದೇಶ ಉಪಚರಿಸಲಾಗುತ್ತಿದೆ. 2024&25ರಲ್ಲಿ 20.03 ಲಕ್ಷ ರೂ.ನಲ್ಲಿ 53.98 ಹೆಕ್ಟೇರ್​ ಭೂಮಿಯನ್ನು ಉಪಚರಿಸಿ ಸುಧಾರಿಸಲು ಯತ್ನಿಸಲಾಗಿದೆ. ಕೇಂದ್ರ ಅನುದಾನದಲ್ಲಿ ರಾಯಚೂರು ಜಿಲ್ಲೆಗೆ 60 ಲಕ್ಷ ರೂ. ಬಿಡುಗಡೆಯಾಗಿದ್ದು, 100 ಹೆಕ್ಟೇರ್​ ಸುಧಾರಿಸಲಾಗಿದೆ. ಕೊಪ್ಪಳಕ್ಕೆ 17.29 ಲಕ್ಷ ರೂ. ಬಂದಿದ್ದು, 22 ಹೆಕ್ಟೇರ್​ ಉಪಚರಿಸುವ ಕೆಲಸವಾಗಿದೆ. ವಿಜಯನಗರ ಜಿಲ್ಲೆಗೆ ಯಾವುದೇ ಅನುದಾನ ಬಂದಿಲ್ಲ. ನರೇಗಾದಡಿ ಕೊಪ್ಪಳದ ಕನಕಗಿರಿ ತಾಲೂಕಿನ ಆದಾಪುರ ಗ್ರಾಮದಲ್ಲಿ 17.32 ಲಕ್ಷ ರೂ.ನಲ್ಲಿ 43 ಎಕರೆ ಸವಳು ಭೂಮಿ ಉಪಚಾರಕ್ಕೆ ಖರ್ಚು ಮಾಡಲಾಗಿದೆ.

ಕಾರಣವೇನು ?

ಪ್ರಮುಖವಾಗಿ ಕೃಷಿ ಭೂಮಿ ಸವಳಾಗಲು ಅತಿಯಾದ ನೀರಿನ ಬಳಕೆ ಕಾರಣವಾಗುತ್ತದೆ. ಅವಶ್ಯಕತೆಗಿಂತ ಹೆಚ್ಚಿನ ನೀರು ಬಳಸಿದಾಗ ಭೂಮಿಯಲ್ಲಿನ ಎಲ್ಲ ಲವಣಗಳು ಮೇಲ್ಭಾಗಕ್ಕೆ ಬರುವುದರಿಂದ ಉಪ್ಪಿನಾಂಶ ಅತಿಯಾಗಿ ಮಣ್ಣು ಸತ್ವ ಕಳೆದುಕೊಳ್ಳುತ್ತದೆ. ಒಣ ಬೇಸಾಯದಲ್ಲಿ ಅತಿಯಾದ ಬಿಸಿಲಿನ ಪ್ರಮಾಣವೂ ಭೂಗರ್ಭದೊಳಗಿನ ನೀರಿನ ಪ್ರಮಾಣ ಕಡಿತಗೊಳಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಭೂಮಿಯಾಳದಿಂದ ಹೊರಬರುವ ನೀರು ಲವಣ ಹೊತ್ತು ತಂದು ಆವಿಯಾಗಲಿದ್ದು, ಲವಣಾಂಶ ಹಾಗೇ ಉಳಿಯುತ್ತದೆ. ಇನ್ನು ಅತಿಯಾದ ರಸಾಯನಿಕ ಗೊಬ್ಬರ ಬಳಕೆಯಿಂದಲೂ ಮಣ್ಣಿನ ಸತ್ವ ಕಳೆದುಕೊಳ್ಳುತ್ತಿದ್ದು, ಸವಳು&ಜವಳು ಪ್ರಮಾಣ ಅಧಿಕಗೊಳ್ಳುತ್ತಿದೆ. ಈ ಬಗ್ಗೆ ರೈತಾಪಿವರ್ಗ ಗಮನ ನೀಡಬೇಕಿದೆ.
"

ಅತಿಯಾದ ನೀರಿನ ಬಳಕೆ, ಬಿಸಿಲಿನ ಪ್ರಮಾಣದಿಂದ ಕೃಷಿ ಭೂಮಿ ಸವಳಾಗಿ ಪರಿವರ್ತನೆಯಾಗುತ್ತದೆ. ರಸಗೊಬ್ಬರ ಮಿತಿ ಮೀರಿದ ಬಳಕೆಯೂ ಇದಕ್ಕೆ ಕಾರಣವಾಗುತ್ತದೆ. ಹೀಗಾಗಿ ಮಣ್ಣಿನ ಮೇಲ್ಪದರದ ಮೇಲೆ ಸಾವಯವ ಗೊಬ್ಬರ, ಹಸಿರೆಲೆ, ಕೃಷಿ ತ್ಯಾಜ್ಯ ಹರಡಬೇಕು. ಸೂಕ್ಷಾ$್ಮಣು ಜೀವಿಗಳ ಜೀವಂತಿಕೆ ಕಾಯ್ದುಕೊಳ್ಳಬೇಕು. ತೇವಾಂಶ ಕೊರತೆಯಾದಲ್ಲಿ ನೀರು ಕರಗಿ ಲವಣಗಳು ಭೂಮೇಲ್ಭಾಗದಲ್ಲಿ ಉಳಿಯುವುದರಿಂದಲೂ ಜವಳಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net