ಕೃಷಿ ಪರಿಕರ ಮಾರಾಟಗಾರರ ಸಂಘದ ಹೋರಾಟಕ್ಕೆ ಬೆಂಬಲ

ಕೃಷಿ ಪರಿಕರಗಳ ಮಾರಾಟಗಾರರ ಸಂಘ ನಾನಾ ಬೇಡಿಕೆ ಈಡೇರಿಸಲು ಆಗ್ರಹಿಸಿ ರಾಷ್ಟ್ರವ್ಯಾಪಿ ಕರೆಯಲಾಗಿದ್ದ ಬಂದ್ ಅಂಗವಾಗಿ ಸೋಮವಾರ ಇಲ್ಲಿನ ವ್ಯಾಪಾರಸ್ಥರು, ಮಾಲೀಕರು ಅಂಗಡಿ ಮುಚ್ಚಿರುವುದು.
ಕೃಷಿ ಪರಿಕರಗಳ ಮಾರಾಟಗಾರರ ಸಂಘ ನಾನಾ ಬೇಡಿಕೆ ಈಡೇರಿಸಲು ಆಗ್ರಹಿಸಿ ರಾಷ್ಟ್ರವ್ಯಾಪಿ ಕರೆಯಲಾಗಿದ್ದ ಬಂದ್ ಅಂಗವಾಗಿ ಸೋಮವಾರ ಇಲ್ಲಿನ ವ್ಯಾಪಾರಸ್ಥರು, ಮಾಲೀಕರು ಅಂಗಡಿ ಮುಚ್ಚಿರುವುದು.
Published on
ಕನಕಗಿರಿ: ನಾನಾ ಬೇಡಿಕೆ ಈಡೇರಿಸಲು ಆಗ್ರಹಿಸಿ ದೇಶವ್ಯಾಪಿ ಕೃಷಿ ಪರಿಕರಗಳ ಮಾರಾಟಗಾರರ ಸಂಘದಿಂದ ಸೋಮವಾರ ಕರೆಯಲಾಗಿದ್ದ ಸಾಂಕೇತಿಕ ಬಂದ್ ಭಾಗವಾಗಿ ಪಟ್ಟಣದಲ್ಲಿ ರಸಗೊಬ್ಬರ, ಬೀಜ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಹೋರಾಟಕ್ಕೆ ಬಂಬಲ ಸೂಚಿಸಿದರು.
ಸಂಘದ ತಾಲೂಕು ಅಧ್ಯಕ್ಷ ರಾಘವೇಂದ್ರ ಖ್ಯಾಡೇದ್ ಮಾತನಾಡಿ, ರೈತರ ಎಫ್‌ಐಡಿ ಮೂಲಕ ರಸಗೊಬ್ಬರ ವಿತರಣೆ ಹಾಗೂ ರಸಗೊಬ್ಬರಗಳ ಪೂರೈಸುವುದಕ್ಕಾಗಿ ಅನೇಕ ಕಂಪನಿಗಳು ಹೇರುತ್ತಿರುವ ಲಿಂಕ್ ಹೊರೆ ರದ್ದುಪಡಿಸಬೇಕು. ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಗಳಲ್ಲಿನ ರಸಗೊಬ್ಬರ ಅಂಗಡಿಗಳಿಗೆ ರಸಗೊಬ್ಬರ, ಔಷಧ ಸರಬರಾಜುಗೊಳಿಸಲು ಸಾರಿಗೆ ವೆಚ್ಚ ಭರಿಸಲು ನಮಗೆ ಹೊರೆಯಾಗುತ್ತಿದೆ. ಎಲ್ಲ ರಸಗೊಬ್ಬರಗಳ ಮೇಲಿನ ನಿಗದಿತ ದರ ಶೇ.8 ಲಾಭಾಂಶವನ್ನು ಮಾರಾಟಗಾರರಾದ ನಮಗೆ ಡೀಲರ್‌ಗಳೇ ಕೊಡಿಸಬೇಕು ಎಂದು ಒತ್ತಾಯಿಸಿದರು.
ಗೌರವಾಧ್ಯಕ್ಷ ರವಿ ಸಜ್ಜನ್, ಉಪಾಧ್ಯಕ್ಷ ಗುಂಡಪ್ಪ ಕನ್ನೆರಮಡು, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಗುಗ್ಗಳಶೆಟ್ರ, ಖಜಾಂಚಿ ಸೂರ್ಯ ತೇಜ, ವ್ಯಾಪರಸ್ಥರಾದ ಮಹಾಬಳೇಶಪ್ಪ ಎಂ, ಮಂಜುನಾಥ ಸಜ್ಜನ್, ಅಂಭಾಜಿರಾವ್, ಸೋಮಶೇಖರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net