ಭಾರತೀಯ ಪರಂಪರೆ ಶ್ರೇಷ್ಠತೆ ಸಂಕೇತ

ಕಾರಟಗಿಯಲ್ಲಿ ಪತಂಜಲಿ ಯೋಗ ಸಮಿತಿಯಿಂದ ಗುರುವಾರ ಆಯೋಜಿಸಿದ್ದ ವಿಶೇಷ ಗರ್ಭ ಸಂಸ್ಕಾರ ಹಾಗೂ 108 ಅಗ್ನಿಹೋತ್ರ ಮಹಾಯಜ್ಞ ಕಾರ್ಯಕ್ರಮಕ್ಕೆ ಪತಂಜಲಿ ಯೋಗಪೀಠದ   ಕರ್ನಾಟಕ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ ಚಾಲನೆ ನೀಡಿದರು. ಸಿ.ಎಚ್.ಶರಣಪ್ಪ, ಮೀನಾಕ್ಷಿ ಶರಣಪ್ಪ, ಪ್ರಸಾದ್ ಚಿಟ್ಟೂರಿ ಇದ್ದರು.

Published on
ಕಾರಟಗಿ: ಪಟ್ಟಣದ ಎಲ್‌ವಿಟಿ ಕಲ್ಯಾಣ ಮಂಟಪದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಪತಂಜಲಿ ಯೋಗ ಸಮಿತಿಯಿಂದ ಗರ್ಭಿಣಿ ಮಹಿಳೆಯರಿಗಾಗಿ ವಿಶೇಷ ಗರ್ಭ ಸಂಸ್ಕಾರ ಹಾಗೂ 108 ಅಗ್ನಿಹೋತ್ರ ಮಹಾಯಜ್ಞ ಕಾರ್ಯಕ್ರಮ ಗುರುವಾರ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪತಂಜಲಿ ಯೋಗಪೀಠದ ಕರ್ನಾಟಕ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ ಮಾತನಾಡಿ, ವೇದಗಳ ಕಾಲದಿಂದಲೂ ಭಾರತೀಯ ಪರಂಪರೆ ತುಂಬಾ ಮಹತ್ವ ಹೊಂದಿದೆ. ಗರ್ಭ ಸಂಸ್ಕಾರದಲ್ಲಿ ಸದ್ಗುಣ, ದೀರ್ಘಾಯುಷ್ಯ, ಹಾಗೂ ಬಲಿಷ್ಠ ಮಗುವಿಗಾಗಿ ಮಾಡುವ ಸಂಕಲ್ಪ ನೆರವೇರಲಿವೆ ಎಂದರು.
ಸಂಪನ್ಮೂಲ ವ್ಯಕ್ತಿ ಡಾ.ಸುಪ್ರಿತಾ, ಗರ್ಭಿಣಿಯರು ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು. ಪ್ರಮುಖರಾದ ಮಂಜುಳಾ ಪಾಟೀಲ್, ಉದ್ಯಮಿ ಕೆ.ನಾಗಪ್ಪ, ಪತಂಜಲಿ ಯೋಗಪೀಠದ ಸಹ ರಾಜ್ಯ ಪ್ರಭಾರಿ ಸಿ.ಎಚ್.ಶರಣಪ್ಪ, ಮಹಿಳಾ ಜಿಲ್ಲಾ ಪ್ರಭಾರಿ ಮೀನಾಕ್ಷಿ ಶರಣಪ್ಪ, ತಾಲೂಕು ಪ್ರಭಾರಿ ಪ್ರಸಾದ್ ಚಿಟ್ಟೂರಿ, ಶರಣೇಗೌಡ ಬೂದಗುಂಪಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net