ಅರಣ್ಯೀಕರಣಕ್ಕೆ ನೀಡಬೇಕಿದೆ ಆದ್ಯತೆ

ಗಂಗಾವತಿ ತಾಲೂಕಿನ ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಬ್ಲಕ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಪರಿಸರ ರಕ್ಷಣೆಯ ನೃತ್ಯರೂಪಕ ಶುಕ್ರವಾರ ಜರುಗಿತು.
ಗಂಗಾವತಿ ತಾಲೂಕಿನ ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಬ್ಲಕ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಪರಿಸರ ರಕ್ಷಣೆಯ ನೃತ್ಯರೂಪಕ ಶುಕ್ರವಾರ ಜರುಗಿತು.
Published on

ಪ್ರಮುಖ ಮುಖ್ಯಾಂಶಗಳು

  • ಸಂರಕ್ಷಣಾಧಿಕಾರಿ ಬಸವರಾಜ ಪೂಜಾರ್ ಅಭಿಮತ
  • ಗಂಗಾವತಿ ವಿಶ್ವ ಪರಿಸರ ದಿನಾಚರಣೆ
ಗಂಗಾವತಿ: ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಪರಿಸರ ಸಂರಕ್ಷಣೆಯೊಂದಿಗೆ ಪ್ರಮುಖ ಕಾರ್ಯವಾಗಿದ್ದು, ಮರಗಳನ್ನು ಬೆಳೆಸುವಂತೆ ಅರಣ್ಯ ಇಲಾಖೆ ವಲಯ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ ಪೂಜಾರ್ ಸಲಹೆ ನೀಡಿದರು.
ನಗರದ ಬಾಲಕರ ಸ.ಪ.ಪೂ.ಕಾಲೇಜಿನಲ್ಲಿ ಅರಣ್ಯ ಇಲಾಖೆಯಿಂದ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ದೇಶದ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಪರಿಸರ ಪ್ರಮಾಣ ಶೇ.23ಕ್ಕೆ ಸೀಮಿತವಾಗಿದೆ. ಸ್ವಚ್ಛ ಗಾಳಿ, ವಾತಾವರಣಕ್ಕೆ ಶೇ.33ರಷ್ಟು ಅರಣ್ಯೀಕರಣಕ್ಕೆ ಒತ್ತು ನೀಡಬೇಕಿದೆ. ಪ್ರತಿಯೊಬ್ಬರು ಸಸಿ ನೆಡುವುದರ ಜತೆಗೆ ಮರಗಳನ್ನು ಬೆಳೆಸುವ ಜವಾಬ್ದಾರಿ ಪಡೆಯಬೇಕು. ಪರಿಸರ ಸ್ವಚ್ಛತೆ ಮತ್ತು ಸಂರಕ್ಷಣೆಯತ್ತ ವಿದ್ಯಾರ್ಥಿಗಳು ಗಮನಹರಿಸಲು ಸಲಹೆ ನೀಡಿದರು.
ಸಾಮಾಜಿಕ ವಲಯ ಅರಣ್ಯಾಧಿಕಾರಿ ಕೆ.ರಾಘವೇಂದ್ರ ಮಾತನಾಡಿ, ಅರಣ್ಯೀಕರಣ ನಾಶದಿಂದ ಪರಿಸರದ ಮೇಲೆ ಪರಿಣಾಮ ಬೀರಿದ್ದು, ಹವಾಮಾನ ವೈಪರಿತ್ಯಕ್ಕೆ ಕಾರಣವಾಗಿದೆ. ಪರಿಸರ ಸಂರಕ್ಷಣೆ ದಿನಾಚರಣೆಗೆ ಸೀಮಿತವಾಗದೇ ದೈನಂದಿನ ಕಾರ್ಯಕ್ರಮವಾಗಬೇಕಿದೆ ಎಂದರು.
ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ಚಿದಾನಂದ ಮೇಟಿ ಉಪನ್ಯಾಸ ನೀಡಿದರು. ಪ್ರಾಚಾರ್ಯ ಬಸಪ್ಪ ನಾಗೋಲಿ, ಉಪನ್ಯಾಸಕರಾದ ರಮಾ, ಅಜಗರ್ ಪಾಶಾ ಇತರರಿದ್ದರು.
ಶ್ರೀರಾಮನಗರ: ಇಲ್ಲಿನ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಪರಿಸರ ರಕ್ಷಣೆಯ ನೃತ್ಯರೂಪಕ ಹಮ್ಮಿಕೊಳ್ಳಲಾಗಿತ್ತು. ಶಾಲಾವರಣದಲ್ಲಿ ಸಸಿ ನೆಡುವುದರ ಮೂಲಕ ಚಾಲನೆ ನೀಡಿದ ಶಾಲಾಡಳಿತ ಮಂಡಳಿ ಉಪಾಧ್ಯಕ್ಷ ನೆಕ್ಕಂಟಿ ಆದರ್ಶ ಮಾತನಾಡಿ, ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಪ್ರತಿಯೊಬ್ಬರು ಮರಗಳನ್ನು ಬೆಳೆಸುವ ಸಂಕಲ್ಪ ಕೈಗೊಳ್ಳುವಂತೆ ಸಲಹೆ ನೀಡಿದರು. ಪರಿಸರ ದಿನಾಚರಣೆ ನಿಮಿತ್ತ ಪ್ರಬಂಧ, ಚಿತ್ರಕಲಾ ಸ್ಪರ್ಧೆ, ಕಿರುನಾಟಕ ಹಾಗೂ ನತ್ಯರೂಪಕಗಳನ್ನು ಆಯೋಜಿಸಲಾಗಿತ್ತು. ಪರಿಸರ ಮಹತ್ವ ಕುರಿತು ವಿದ್ಯಾರ್ಥಿನಿಯರಾದ ಸಾಹಿತಿ ಮತ್ತು ಲಕ್ಷ್ಮಿ ಪ್ರಸನ್ನ ಮಾತನಾಡಿದರು. ಶಿಕ್ಷಕಿ ಅಯಿಷಾ ಸೇರಿ ಶಿಕ್ಷಕರಿದ್ದರು.
ಪ್ರಶಾಂತನಗರ ಉದ್ಯಾನ: ನಗರದ 11ನೇ ವಾರ್ಡ್ ಪ್ರಶಾಂತನಗರದ ಉದ್ಯಾನದಲ್ಲಿ ಅರಣ್ಯ ಇಲಾಖೆಯಿಂದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ವನಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಸಸಿ ನೆಡುವುದರ ಮೂಲಕ ಚಾಲನೆ ನೀಡಿದ ನಗರಸಭೆ ಮಾಜಿ ಸದಸ್ಯ ಪರಶುರಾಮ್ ಮಡ್ಡೇರ್ ಮಾತನಾಡಿ, ಸಕಲ ಜೀವಿಗಳ ಬದುಕಿಗೆ ಆಧಾರವಾಗಿರುವ ಮಣ್ಣು, ನೀರು ಹಾಗೂ ಗಾಳಿ ಶುದ್ಧತೆಗೆ ಪರಿಸರ ರಕ್ಷಿಸುವಂತೆ ಸಲಹೆ ನೀಡಿದರು. ನಂತರ ಸ.ಹಿ.ಪ್ರಾ.ಶಾಲೆ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಮಾಜಿ ಸದಸ್ಯ ಮುಷ್ತಾಕ್ ಅಲಿ, ಪ್ರಮುಖರಾದ ರಾಜ ಮಹಮ್ಮದ್, ಲಿಂಗರಾಜ, ವೇಣು ಎಲಿಗಾರ, ಬಸವರಾಜ ಬಾಳೇಕಾಯಿ, ರವಿ, ರಫೀಕ್, ಅಬ್ದುಲ್ ರೆಹಮಾನ್ ಇತರರಿದ್ದರು.
ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘ: ನಗರದ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಶಾಲಾವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ವಿವಿಧ ಬಗೆಬಗೆಯ ಸಸಿಗಳನ್ನು ನೆಡಲಾಯಿತು. ಶ್ರೀ ಕೊಟ್ಟೂರೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಇಕೋ ಕ್ಲಬ್‌ನಿಂದ ಹಮ್ಮಿಕೊಂಡಿದ್ದು, ವಿಜ್ಞಾನ ಶಿಕ್ಷಕ ಲಕ್ಷ್ಮೀಕಾಂತ ಹೇರೂರು ಮಾತನಾಡಿದರು. ಮುಖ್ಯಶಿಕ್ಷಕ ರಾಮನಗೌಡ, ಶಿಕ್ಷಕರಾದ ಎಚ್.ವೈ.ಮಾಸ್ತಮ್ಮನವರ್, ಮುತ್ತನಗೌಡ ಪಾಟೀಲ್, ವಿಶ್ವನಾಥ ಹಿರೇಮಠ, ಜಗದೀಶ ಹಣವಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net