ಕಾರಟಗಿ ತಾಲೂಕಿನ ಬೆನ್ನೂರು ಗ್ರಾಮ ವ್ಯಾಪ್ತಿಯ ರೈತ ಕಂಠಯ್ಯ ಎಂಬುವರಿಗೆ ಸೇರಿದ ಭೂಮಿಯನ್ನು ಕುಡಿವ ನೀರಿನ ಯೋಜನೆಗೆ ಜಿಪಂ ಇಂಜಿನಿಯರಿಂಗ್ ವಿಭಾಗದಿಂದ 2012ರಲ್ಲಿ ಖರೀದಿಸಲಾಗಿತ್ತು. ಇಲಾಖೆ ನೀಡಿದ ಪರಿಹಾರ ಕಡಿಮೆ ಎಂದು ಭೂಮಾಲೀಕ ಕೋರ್ಟ್‌ಗೆ 2014ರಲ್ಲಿ ಮೇಲ್ಮನವಿ ಸಲ್ಲಿಸಿದರು. ಹೆಚ್ಚುವರಿಯಾಗಿ 3.79ಲಕ್ಷ ರೂ. ನೀಡುವಂತೆ ನಗರದ ಜೆಎಂಎ್ಸಿ ಹಿರಿಯ ಶ್ರೇಣಿ ನ್ಯಾಯಾಲಯ ಆದೇಶಿಸಿತ್ತು. ಕೋರ್ಟ್ ತೀರ್ಪಿನಂತೆ ಪರಿಹಾರ ಪಾವತಿಸದಿದ್ದರಿಂದ ಕಕ್ಷಿದಾರ ಪರ ವಕೀಲರಾದ ಪಿ.ವಿ.ಪಾಟೀಲ್, ಹೊನ್ನೂರಪ್ಪ ಬೆನ್ನೂರ್ ಸಮ್ಮುಖದಲ್ಲಿ ಇಲಾಖೆ ಎಇಇ ಸಂಚರಿಸುವ ಬುಲೆರೋ ವಾಹನವನ್ನು ಜಪ್ತಿ ಮಾಡಲಾಯಿತು.