ಕೊಟ್ರೇಶ್ವರ ಕ್ಯಾಂಪ್ ನಿವಾಸಿಗಳು ಟವರ್ ಹಾಕುವ ಸ್ಥಳದಲ್ಲಿ ಪ್ರತಿಭಟನೆ ನಡೆಸಿ ನಗರಸಭೆ ಎಇ ಗುರುರಾಜ ದಾಸನಾಳ್‌ಗೆ ಮನವಿ ಸಲ್ಲಿಸಿದರು. ನಗರಸಭೆ ಮಾಜಿ ಸದಸ್ಯ ಎ್.ರಾಘವೇಂದ್ರ, ನಿವಾಸಿಗಳಾದ ವಿ.ಬಿ.ಮಾಚಾಲಿ, ಪಂಪಾಪತಿ, ಹನುಮಂತಪ್ಪ ಭೋವಿ,ಲಕ್ಷ್ಮೀ ದೇವಿ, ಮಂಜುನಾಥ , ಯಲ್ಲಪ್ಪ ಆಗಲೂರ್ ಇತರರಿದ್ದರು.
ಗಂಗಾವತಿ: ಜನವಸತಿ ಪ್ರದೇಶದಲ್ಲಿ ಬೂಸ್ಟರ್ ಟವರ್ ಹಾಕದಂತೆ ಒತ್ತಾಯಿಸಿ ನಗರದ 28ನೇ ವಾರ್ಡ್ ಕೊಟ್ರೇಶ್ವರ ಕ್ಯಾಂಪ್ ನಿವಾಸಿಗಳು ಟವರ್ ಹಾಕುವ ಸ್ಥಳದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಟವರ್ ಹಾಕಲು ವಿರೋಧಿಸಿದ್ದ ನಿವಾಸಿಗಳ ಕಣ್ಣು ತಪ್ಪಿಸಿ, ಕಾಮಗಾರಿ ಆರಂಭಿಸಿದ್ದರಿಂದ ಆಕ್ರೋಶಗೊಂಡ ನಿವಾಸಿಗಳು ದಿಢೀರ್ ಪ್ರತಿಭಟನೆ ನಡೆಸಿದರು. ಬೇಡಿಕೆ ಮನವಿಯನ್ನು ನಗರಸಭೆ ಎಇ ಗುರುರಾಜ ದಾಸನಾಳ್‌ಗೆ ಸಲ್ಲಿಸಿದರು.
ನಗರಸಭೆ ಮಾಜಿ ಸದಸ್ಯ ಎ್.ರಾಘವೇಂದ್ರ ಮಾತನಾಡಿ, ವಿಕಿರಣಗಳನ್ನು ಹೊರಹಾಕುವ ಟವರ್ ಹಾಕದಂತೆ ಹಲವು ಬಾರಿ ಮನವಿ ಮಾಡಿದರೂ ಖಾಸಗಿ ಸಂಸ್ಥೆಯವರು ಜನವಸತಿ ಪ್ರದೇಶದಲ್ಲಿ ಟವರ್ ಹಾಕುತ್ತಿದ್ದಾರೆ. ಇದರಿಂದ ಮಕ್ಕಳು, ಗರ್ಭಿಣಿಯರು, ವಯೋವೃದ್ಧರ ಮೇಲೆ ಪರಿಣಾಮ ಬೀರುತ್ತಿದೆ. ಟವರ್ ಸನಿಹದಲ್ಲಿ ಶಾಲೆಗಳಿದ್ದು, ಮಕ್ಕಳ ಸಂಚಾರ ಹೆಚ್ಚಾಗಿದ್ದು ಯಾವುದೇ ಟವರ್ ಹಾಕಲು ಅವಕಾಶ ನೀಡಲ್ಲ ಎಂದರು.