ಉನ್ನತ ಗುರಿ ಸ್ಪಷ್ಟ ಕನಸಿನೊಂದಿಗೆ ಮುನ್ನುಗ್ಗಿ

ಯಲಬುರ್ಗಾದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ಆರಾಮ್ ಫೌಂಡೇಷನ್‌ನಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಫೌಂಡೇಷನ್ ಅಧ್ಯಕ್ಷೆ ಮಮತಾ ರಾಯರಡ್ಡಿ, ಪದಾಧಿಕಾರಿಗಳಾದ ಆಶಾ ಬಸವರಾಜ ರಾಯರಡ್ಡಿ, ಗಿರಿಜಾ ಸಂಗಟಿ, ಡಾ.ನಂದಿತಾ ದಾನರಡ್ಡಿ, ಜಯಶ್ರೀ ಅರಕೇರಿ, ಶಾರದಾ ಸಾಲಭಾವಿ, ಮಲ್ಲಮ್ಮ ಗೊಂದಿ, ಸಾವಿತ್ರಿ ಗೊಲ್ಲರ್ ಇತರರಿದ್ದರು.
ಯಲಬುರ್ಗಾದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ಆರಾಮ್ ಫೌಂಡೇಷನ್‌ನಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಫೌಂಡೇಷನ್ ಅಧ್ಯಕ್ಷೆ ಮಮತಾ ರಾಯರಡ್ಡಿ, ಪದಾಧಿಕಾರಿಗಳಾದ ಆಶಾ ಬಸವರಾಜ ರಾಯರಡ್ಡಿ, ಗಿರಿಜಾ ಸಂಗಟಿ, ಡಾ.ನಂದಿತಾ ದಾನರಡ್ಡಿ, ಜಯಶ್ರೀ ಅರಕೇರಿ, ಶಾರದಾ ಸಾಲಭಾವಿ, ಮಲ್ಲಮ್ಮ ಗೊಂದಿ, ಸಾವಿತ್ರಿ ಗೊಲ್ಲರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆರಾಮ್ ಫೌಂಡೇಷನ್ ಅಧ್ಯಕ್ಷೆ ಮಮತಾ ರಾಯರಡ್ಡಿ ಸಲಹೆ
  • ಯಲಬುರ್ಗಾ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಯಲಬುರ್ಗಾ: ವಿದ್ಯಾರ್ಥಿಗಳು ಶ್ರದ್ಧೆ, ಶಿಸ್ತು ಮತ್ತು ಕಠಿಣ ಪರಿಶ್ರಮದೊಂದಿಗೆ ಶಿಕ್ಷಣವನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಯಾವುದೇ ಗುರಿಯನ್ನು ಸಾಧಿಸಬಹುದು ಎಂದು ಆರಾಮ್ ಫೌಂಡೇಷನ್ ಅಧ್ಯಕ್ಷೆ ಮಮತಾ ರಾಯರಡ್ಡಿ ಹೇಳಿದರು.
ಪಟ್ಟಣದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ಆರಾಮ್ ಫೌಂಡೇಷನ್‌ನಿಂದ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವುದಷ್ಟೇ ಯಶಸ್ಸಿನ ಮಾನದಂಡವಲ್ಲ. ಜೀವನದಲ್ಲಿ ಉನ್ನತ ಗುರಿ ಮತ್ತು ಸ್ಪಷ್ಟ ಕನಸುಗಳನ್ನು ಹೊಂದಿ ಮುನ್ನಡೆಯಬೇಕು. ಹೀಗಾಗಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ, ಸಾಮರ್ಥ್ಯ ಮತ್ತು ಸಾಧನೆ ಮನೋಭಾವವನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ನಗರದ ಮಕ್ಕಳಿಗೆ ಸಮಾನವಾಗಿ, ಕೆಲವೊಮ್ಮೆ ಅವರಿಗಿಂತಲೂ ಉತ್ತಮ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ನಿವೃತ್ತ ಡಿಡಿಪಿಐ ಶಂಕ್ರಪ್ಪ ಗಾಂಜಿ ಮಾತನಾಡಿ, ಶಾಸಕ ಬಸವರಾಜ ರಾಯರಡ್ಡಿ ಅವರು ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿಗೆ ಕಾರಣಕರ್ತರಾಗಿದ್ದಾರೆ. ಶಿಕ್ಷಣದ ಜತೆಗೆ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ, ಶಿಸ್ತು ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಗುರುತಿಸಿಕೊಳ್ಳುವ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ ಎಂದರು.
ಆರಾಮ್ ಫೌಂಡೇಷನ್ ಪದಾಧಿಕಾರಿಗಳಾದ ಆಶಾ ಬಸವರಾಜ ರಾಯರೆಡ್ಡಿ, ಗಿರಿಜಾ ಸಂಗಟಿ, ಡಾ.ನಂದಿತಾ ದಾನರಡ್ಡಿ, ಜಯಶ್ರೀ ಅರಕೇರಿ, ಶಾರದಾ ಸಾಲಭಾವಿ, ಮಲ್ಲಮ್ಮ ಗೊಂದಿ, ಸಾವಿತ್ರಿ ಗೊಲ್ಲರ್, ಫರೀದಾಬೇಗಂ, ಪ್ರವೀಣಾ ವಣಗೇರಿ, ಜಯಶ್ರೀ ಕಂದಕೂರು, ಶರಣಮ್ಮ ಪೂಜಾರ, ಸಾವಿತ್ರಿ, ಮಹಾದೇವಿ ಚಕ್ಕಡಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net