ದೀಪದಂತೆ ಬೆಳಗುವ ಗುಣ ಅಳವಡಿಸಿಕೊಳ್ಳಿ

ಅಳವಂಡಿ ಸಮೀಪದ ಮೋರನಹಳ್ಳಿ ಗ್ರಾಮದಲ್ಲಿ ಶ್ರೀ ಗೋಣಿ ಬಸವೇಶ್ವರ ಸ್ವಾಮಿ ಕಾರ್ತಿಕೋತ್ಸವದಲ್ಲಿ ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಮಾತನಾಡಿದರು. ಮಾಜಿ ಸಿಎಂ ಆಪ್ತ ಕಾರ್ಯದರ್ಶಿ ಮಲ್ಲೇಶಪ್ಪ ಹೊರಪೇಟಿ, ಪ್ರಮುಖರಾದ ಮುತ್ತಯ್ಯ ಬ್ರಹನ್ಮಠ, ಅಂದಪ್ಪ ಚಿಲಗೋಡ್ರ, ಹನುಮಂತ ಸಾಹುಕಾರ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ದೀಪ
  • ಕಾರ್ತಿಕೋತ್ಸವ
  • ಗೋಣಿ ಬಸವೇಶ್ವರ

ದೀಪದಂತೆ ಬೆಳಗುವ ಗುಣ ಅಳವಡಿಸಿಕೊಳ್ಳಿ

ಅಳವಂಡಿ: ದೀಪಕ್ಕೆ ಜಗವ ಬೆಳಗುವ ಶಕ್ತಿ ಇದೆ. ಮನುಷ್ಯರೂ ದೀಪದಂತೆ ಬೆಳಗುವ ಗುಣ ಅಳವಡಿಸಿಕೊಳ್ಳಬೇಕು ಎಂದು ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಹೇಳಿದರು.
ಸಮೀಪದ ಮೋರನಹಳ್ಳಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಗೋಣಿ ಬಸವೇಶ್ವರ ಸ್ವಾಮಿಯ ಮೊದಲ ವರ್ಷದ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೀಪ ಬೆಳಗಿಸುವುದರಿಂದ ಮನಶಾಂತಿ ಹಾಗೂ ಎಲ್ಲರೊಂದಿಗೆ ಕೂಡಿ ಜೀವಿಸುವ ಗುಣ ಬೆಳೆಸಲಿದೆ. ದೀಪ ತನ್ನನ್ನು ಸುಟ್ಟುಕೊಂಡು ಬೆಳಗುವಂತೆ ಮನಷ್ಯ ದುರ್ಗುಣಗಳನ್ನು ಸುಟ್ಟು ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ತಿಕೋತ್ಸವ ನಿಮಿತ್ತ ದೇವಸ್ಥಾನವನ್ನು ತಳಿರು ತೋರಣದಿಂದ ಅಲಂಕರಿಸಲಾಗಿತ್ತು. ಭಕ್ತರು ದೇವರಿಗೆ ವಿಶೇಷ ಪೂಜೆ, ನೈವೇದ್ಯ ಅರ್ಪಿಸಿದರು. ಸಂಜೆ ದೀಪ ಬೆಳಗಿಸಿ ಸಂಭ್ರಮಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಾಜಿ ಸಿಎಂ ಆಪ್ತ ಕಾರ್ಯದರ್ಶಿ ಮಲ್ಲೇಶಪ್ಪ ಹೊರಪೇಟಿ, ಪ್ರಮುಖರಾದ ಮುತ್ತಯ್ಯ ಬ್ರಹನ್ಮಠ, ಅಂದಪ್ಪ ಚಿಲಗೋಡ್ರ, ಹನುಮಂತ ಸಾಹುಕಾರ, ಶಿವಪ್ಪ ಸಂಗಟಿ, ರಾಮಣ್ಣ ಹೊರಪೇಟಿ, ವಿರೂಪಾಕ್ಷಪ್ಪ ಆಲೂರು, ಹನುಮಂತ ಹೊರಪೇಟಿ, ಮಲ್ಲಯ್ಯ ಗುರುವಿನ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net