ಬಿಸರಳ್ಳಿ ಗ್ರಾಮದ ಶ್ರೀ ಗವಿಸಿದ್ಧೇಶ್ವರ ಶಾಖಾ ಮಠದಲ್ಲಿ ಲಿಂ. ಶಿವಶಾಂತವೀರ ಸ್ವಾಮೀಜಿ ಹಾಗೂ ಲಿಂ. ಮರಿಶಾಂತವೀರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ಆಯೋಜಿಸಿದ್ದ ಶ್ರೀ ಗವಿಸಿದ್ಧೇಶ್ವರ ಪುರಾಣ ಪ್ರವಚನ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಧರ್ಮ ಎನ್ನುವುದು ಆಚರಣೆ, ಸಂಪ್ರದಾಯಗಳಿಗೆ ಸೀಮಿತವಾಗಬಾರದು. ಧರ್ಮದ ಮೂಲ ಆಶಯವನ್ನು ಅರಿತು ಸತ್ಯ, ಶಾಂತಿ, ದಯೆ, ಕರುಣೆ ಹಾಗೂ ಸಂಸ್ಕಾರ ಅಳವಡಿಸಿಕೊಳ್ಳಬೇಕು. ಗವಿಸಿದ್ಧೇಶ್ವರನ ತತ್ವಾದರ್ಶಗಳು ಸಮಾಜದಲ್ಲಿ ಸದಾಚಾರ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಸಂದೇಶವನ್ನು ಸಾರುತ್ತವೆ ಎಂದರು.