ನಾಯಕರ ಆದರ್ಶಗಳನ್ನು ಅಳವಡಿಸಿಕೊಳ್ಳಿ

ಸಂಕನೂರು ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಮ್ ಜಯಂತಿ ಆಚರಿಸಲಾಯಿತು. ಕಾಂಗ್ರೆಸ್ ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ಶಿವಾನಂದ ಬಣಕಾರ , ಪ್ರಮುಖರಾದ ಶರಣಪ್ಪ ಕಟ್ಟಿಮನಿ, ಮೂಕಪ್ಪ ಕಟ್ಟಿಮನಿ, ಹನುಮಂತ ಕಟ್ಟಿಮನಿ, ಸುರೇಶ ಕಟ್ಟಿಮನಿ, ನಾಗರಾಜ ತಲ್ಲೂರು, ದುರಗಪ್ಪ ಕಟ್ಟಿಮನಿ, ಮಾಂತೇಶ ಬೂದಗುಂಪಿ, ನಾಗರಾಜ ಸನ್ನಾಳ, ಯಮನಪ್ಪ ಬಣಕಾರ, ಮಲ್ಲಪ್ಪ ಅಣಿಗಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸಮಾಜದ
  • ಪ್ರಗತಿ
  • ಅಂಬೇಡ್ಕರ್
ಯಲಬುರ್ಗಾ: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಚಿಂತನೆಗಳು ಸಮಾನತೆ, ನ್ಯಾಯ ಮತ್ತು ಸ್ವಾಭಿಮಾನಕ್ಕೆ ದಾರಿದೀಪವಾಗಿವೆ ಎಂದು ಕಾಂಗ್ರೆಸ್ ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ಶಿವಾನಂದ ಬಣಕಾರ ಹೇಳಿದರು.
ತಾಲೂಕಿನ ಸಂಕನೂರು ಗ್ರಾಮದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಮ್ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಸಂದೇಶವನ್ನು ನೀಡಿದ ಅಂಬೇಡ್ಕರ್ ಅವರ ಚಿಂಚನೆಗಳು ಇಂದಿನ ಸಮಾಜದಲ್ಲಿ ಪ್ರಸ್ತುತವಾಗಿವೆ. ಯುವಕರು ಈ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದ ಪ್ರಗತಿಗೆ ಶ್ರಮಿಸಬೇಕು. ಬಾಬು ಜಗಜೀವನ ರಾಮ್ ಅವರ ಸೇವೆ ಸಮಾಜದ ಹಿಂದುಳಿದ ವರ್ಗಗಳ ಉತ್ತೇಜನಕ್ಕೆ ಮಹತ್ವಪೂರ್ಣವಾಗಿದೆ. ಮಹಾನ್ ನಾಯಕರ ಜಯಂತಿಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದರು.
ಇಟಗಿ ಗದಿಗೆಪ್ಪ ಅಜ್ಜ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯವಾಗಿದೆ. ಶಿಕ್ಷಣವೇ ವ್ಯಕ್ತಿಯ ಭವಿಷ್ಯವನ್ನು ರೂಪಿಸುವ ಶಕ್ತಿಯಾಗಿದ್ದು, ಸಮಾಜದಲ್ಲಿ ಸಮಾನತೆ ಮತ್ತು ಅಭಿವೃದ್ಧಿಗೆ ಇದು ಪ್ರಮುಖ ಸಾಧನವಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net