ಜ.15ರಂದು ಜಯಂತಿ ಇದ್ದು ಅಂದು ಮಕರ ಸಂಕ್ರಾಂತಿ ಕಾರಣ ಸಾರ್ವತ್ರಿಕ ರಜೆ ಇರಲಿದೆ. ಸಮುದಾಯ ಮುಖಂಡರ ಸಲಹೆಯಂತೆ ಜ.28ಕ್ಕೆ ಆಚರಿಸಲಾಗುವುದು. ಜಿಲ್ಲಾ, ತಾಲೂಕು ಕಚೇರಿ, ಗ್ರಾಪಂ, ಸರ್ಕಾರಿ ಶಾಲಾ&ಕಾಲೇಜು, ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಜಯಂತಿ ಆಚರಿಸಿ. ಜಯಂತಿ ದಿನದಂದು ಬೆಳಗ್ಗೆ 9 ಗಂಟೆಗೆ ಕೊಪ್ಪಳದ ಗವಿಸಿದ್ದೇಶ್ವರ ಮಠದಿಂದ ಸಾಹಿತ್ಯ ಭವನದವರೆಗೆ ಭಾವಚಿತ್ರ ಮೆರವಣಿಗೆ ಇರಲಿದೆ. 10.30ಕ್ಕೆ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಶೇಷ ಉಪನ್ಯಾಸ, ಗಣ್ಯರ ಸನ್ಮಾನ ಮಾಡಲಾಗುವುದೆಂದು ತಿಳಿಸಿದರು.