ಜಕಣಾಚಾರಿ ಸಂಸ್ಮರಣೆ ಜ.1ರಂದು

ಕೊಪ್ಪಳದಲ್ಲಿ ಶುಕ್ರವಾರ ಎಡಿಸಿ ಸಿದ್ರಾಮೇಶ್ವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು
ಕೊಪ್ಪಳದಲ್ಲಿ ಶುಕ್ರವಾರ ಎಡಿಸಿ ಸಿದ್ರಾಮೇಶ್ವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು
Published on

ಪ್ರಮುಖ ಮುಖ್ಯಾಂಶಗಳು

  • ಎಡಿಸಿ ಸಿದ್ರಾಮೇಶ್ವರ ಹೇಳಿಕೆ
ಕೊಪ್ಪಳ: ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನವನ್ನು 2026ರ ಜ.1ರಂದು ಜಿಲ್ಲಾಡಳಿತಿಂದ ಆಚರಿಸುವುದಾಗಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ತಿಳಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಮುದಾಯ ಮುಖಂಡರೊಡನೆ ಸಭೆ ನಡೆಸಿ ಮಾತನಾಡಿದರು.
ಸಮುದಾಯ ಮುಖಂಡರ ಕೋರಿಕೆಯಂತೆ ಅಂದು ಬೆಳಗ್ಗೆ 10.30ಕ್ಕೆ ಡಿಸಿ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಸಂಸ್ಮರಣಾ ದಿನ ಆಚರಿಸಲಾಗುವುದು. ಜಕಣಾಚಾರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವಿಸಲಾಗುವುದು. ಅಧಿಕಾರಿಗಳು, ಸಮುದಾಯ ಮುಖಂಡರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಜಿಲ್ಲೆಯ ಶಾಲಾ&ಕಾಲೇಜು ಹಾಗೂ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ದಿನಾಚರಣೆ ಮಾಡಬೇಕು. ಜಿಲ್ಲಾಡಳಿತ ಭವನದಲ್ಲಿ ನಡೆವ ಕಾರ್ಯಕ್ರಮಕ್ಕೆ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚಿಸಿದರು.
ವಿಶ್ವಕರ್ಮ ಅಭಿವೃದ್ಧಿ ನಿಗಮದ ಸದಸ್ಯ ದೇವೇಂದ್ರಪ್ಪ ಬಡಿಗೇರ, ಪ್ರಮುಖರಾದ ಬ್ರಹ್ಮಾನಂದ ಬಡಿಗೇರ್​, ಮೌನೇಶ್​ ಬಡಿಗೇರ್​ ಮಾದಿನೂರು, ಎಚ್ಚರೇಶ್​ ಹೊಸಮನಿ, ಕೃಷ್ಣ ಬಡಿಗೇರ್​ ಮಂಡಲಮರಿ, ದೇವೇಂದ್ರಪ್ಪ ಬಡಿಗೇರ್​, ಮಂಜುನಾಥ ಬನ್ನಿಕೊಪ್ಪ, ಉಮೇಶ್​ ಪತ್ತಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net