ವಿಜಯವಾಣಿ ಪತ್ರಿಕೆಯಲ್ಲಿ ಜ.1ರಂದು ‘ಕಾಯಿಕಟ್ಟದ ಶೇಂಗಾ ರೈತರಿಗೆ ಸಂಕಷ್ಟ’ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಕೃಷಿ ಇಲಾಖೆ ಸಹಾ ಯಕ ನಿರ್ದೇಶಕಿ ಡಾ. ಅಭಿಲಾಷ, ಕೀಟ ಶಾಸ್ತ್ರಜ್ಞ ರಾಘವೇಂದ್ರ, ಸಸ್ಯರೋಗ ತಜ್ಞೆ ರೇವತಿ, ಕೃಷಿ ಅಧಿಕಾರಿ ನವೀನ್ ಅವರ ತಂಡವು ತಾಲೂಕಿನ ಕಲಕೇರಿ, ಬೊಮ್ಮಚಿಹಾಳ, ಹಿರೇಖೇಡ, ಕಾಟಾಪುರ, ನೀರ್ಲೂಟಿ ಇತರ ಗ್ರಾಮಗಳಲ್ಲಿ ಕದರಿ ಲೇಪಾಕ್ಷಿ ತಳಿಯನ್ನು ಬಿತ್ತಿದ ಜಮೀನುಗಳಿಗೆ ತೆರಳಿ ನಾಟಿಯಾಗದ ಬೀಜ, ಬೆಳೆದರೂ ಕಾಯಿ ಕಟ್ಟದ ಶೇಂಗಾ ಬೆಳೆ ಪರಿಶೀಲಿಸಿದರು. ನಷ್ಟ ಅನುಭವಿಸಿದ ಬಗ್ಗೆಯೂ ರೈತರು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು.